ವಿಶಾಖಪಟ್ಟಣಂ (ಆಂಧ್ರಪ್ರದೇಶ):ಧೈರ್ಯವಂತ ಸಬ್ಇನ್ಸ್ಪೆಕ್ಟರ್ ಒಬ್ಬರು ಕೆರೆಗೆ ಹಾರಿ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತಂದಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
Video: ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್ ಇನ್ಸ್ಪೆಕ್ಟರ್ - Andhra Pradesh crime news
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಒಬ್ಬರು ಕೆರೆಗೆ ಹಾರಿ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ.
ವಿಶಾಖಪಟ್ಟಣಂನ ಮಾಡುಗುಲಾದಲ್ಲಿರುವ ಕೆರೆಯೊಂದರಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಆದರೆ, ಯಾರೊಬ್ಬರೂ ಕೂಡ ಕೆರೆಗೆ ಜಿಗಿದು ಶವವನ್ನು ಹೊರತೆಗೆಯುವ ಸಾಹಸಕ್ಕೆ ಕೈ ಹಾಕಲಿಲ್ಲ. ಈ ವೇಳೆ ಸಬ್ ಇನ್ಸ್ಪೆಕ್ಟರ್ ಪಿ.ರಾಮರಾವ್ ಕೆರೆಗೆ ಹಾರಿ ಮೃತದೇಹವನ್ನು ದಡದವರೆಗೆ ಎಳೆದು ತಂದಿದ್ದಾರೆ.
ರಾಮರಾವ್ ಅವರಿಗೆ ಮತ್ತೊಬ್ಬ ಸಬ್ಇನ್ಸ್ಪೆಕ್ಟರ್ ರಾಮಕೃಷ್ಣ ಹಾಗೂ ಕಾನ್ಸ್ಟೇಬಲ್ ವೆಂಕಟರಾವ್ ಸಹಕರಿಸಿದ್ದಾರೆ. ರಾಮ ರಾವ್ರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಅಪರಿಚಿತ ವ್ಯಕ್ತಿಯ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.