ಕಾಕಿನಾಡ(ಆಂಧ್ರಪ್ರದೇಶ): ಇಲ್ಲಿನ ಕಾಕಿನಾಡ ಜಿಲ್ಲೆಯ ಸರ್ಪಾವರಂನ ಸಬ್ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಸರ್ವಿಸ್ ರಿವಾಲ್ವರ್ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಸಂಚಲನ ಮೂಡಿಸಿದೆ. 2014ರಲ್ಲಿ ಎಸ್ಐ ಆಗಿ ಆಯ್ಕೆಯಾಗಿದ್ದ ಇವರು ಸದ್ಯ ಪೂರ್ವ ಗೋದಾವರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸರ್ವಿಸ್ ರಿವಾಲ್ವರ್ನಿಂದ ಗುಂಡಿಕ್ಕಿ ಸಬ್ಇನ್ಸ್ಪೆಕ್ಟರ್ ಆತ್ಮಹತ್ಯೆ 2021ರ ಆಗಸ್ಟ್ನಿಂದ ಕಾಕಿನಾಡ ಜಿಲ್ಲೆಯ ಸರ್ಪವರಂ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದೊಂದಿಗೆ ನಾಗಮಲ್ಲಿತೋಟ ಜಂಕ್ಷನ್ನಲ್ಲಿ ವಾಸವಾಗಿದ್ದರು. ನಿನ್ನೆ ಮುಖ್ಯಮಂತ್ರಿ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿ, ವಾಪಸ್ ಆಗಿದ್ದರು. ಬೆಳಗ್ಗೆ 5 ಗಂಟೆಗೆ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತೊಂದು ಕೋಣೆಯಲ್ಲಿ ಮಲಗಿದ್ದರು.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕರ್ತವ್ಯದಲ್ಲಿನ ಒತ್ತಡದಿಂದಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಇದರ ಮಧ್ಯೆ ಗುಂಡು ತಪ್ಪಾಗಿ ಹಾರಿ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್.ಪಿ. ರವೀಂದ್ರನಾಥ್ ಆಗಮಿಸಿ, ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಮಂಡ್ಯದಲ್ಲಿ ಸನ್ನಿ ಹುಟ್ಟುಹಬ್ಬ.. ರಕ್ತದಾನ ಶಿಬಿರ, ಭರ್ಜರಿ ಬಾಡೂಟ ಹಂಚಿದ ಅಭಿಮಾನಿಗಳು!
ಘಟನೆಗೆ ಸಂಬಂಧಿಸಿದಂತೆ ಗೋಪಾಲಕೃಷ್ಣ ಪತ್ನಿ ನೀಡಿರುವ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಎಲ್ಲ ರೀತಿಯಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಕಾಕಿನಾಡು ಡಿಎಸ್ಪಿ ಭೀಮಾರಾವ್ ತಿಳಿಸಿದ್ದಾರೆ. ಎಸ್ಐ ನಿಧನದಿಂದ ಕುಟುಂಬ ಹಾಗೂ ಹೂಟ್ಟೂರಾದ ನವಾಬಪೇಟೆ ಶೋಕ ಸಾಗರದಲ್ಲಿ ಮುಳುಗಿದೆ.