ಲಖನೌ(ಉತ್ತರ ಪ್ರದೇಶ): ಪ್ರಯಾಗರಾಜ್ ನದಿಗಳ ತೀರದಲ್ಲಿನ ಮರಳಿನಲ್ಲಿ ಸಮಾಧಿಯಾಗಿರುವ ದೇಹಗಳು ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ಭಾರಿ ಪೀಕಲಾಟ ಉಂಟುಮಾಡಿವೆ.
ಮರಳಿನಲ್ಲಿ ಹೂತುಹೋದ ಶವಗಳಿಂದ ಕಾರ್ಮಿಕರು ಕೇಸರಿ ಹೊದಿಕೆಗಳನ್ನು ಎಳೆಯುವುದನ್ನು ತೋರಿಸುವ ವಿಡಿಯೋ ತುಣುಕನ್ನು ಹಂಚಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಅವರು ಜೀವಂತವಾಗಿದ್ದಾಗ ನೀವು ಅವರಿಗೆ ಚಿಕಿತ್ಸೆ ನೀಡಲಾಗಿಲ್ಲ, ಅವರ ಸಾವಿನಲ್ಲಿಯೂ ಘನತೆ ಸಿಗಲಿಲ್ಲ ಹಾಗೆ ಸರ್ಕಾರದ ಡೇಟಾದಲ್ಲಿಯೂ ಇವರಿಗೆ ಸ್ಥಳವಿಲ್ಲ ಎಂದಿದ್ದಾರೆ.
ಈಗ ಸತ್ತವರ ದೇಹವನ್ನು ಮುಚ್ಚಿಡಲಾಗುತ್ತಿದೆ. ಇದು ಯಾವ ರೀತಿಯ ಸ್ವಚ್ಛತೆ ಆಗಿದೆ. ? ಇದು ಸತ್ತವರಿಗೆ, ಧರ್ಮಕ್ಕೆ ಮತ್ತು ಮಾನವೀಯತೆಗೆ ಅಗೌರವ ತೋರಿಸುವ ಪ್ರಕ್ರಿಯೆ ಎಂದಿದ್ದಾರೆ.
ಶವಸಂಸ್ಕಾರದ ವೆಚ್ಚವನ್ನು ಭರಿಸುವುದು ಕಷ್ಟಕರ ಎಂದು ಅರಿತು ಹೆಚ್ಚಿನ ಸಂಖ್ಯೆಯ ಶವಗಳನ್ನು ಆಳವಿಲ್ಲದ ಮರಳು ಸಮಾಧಿಯಲ್ಲಿ ಹೂತು ಹಾಕಲಾಗಿದೆ. ಹಾಗೆ ಗಂಗಾ ನದಿ ತೀರದಲ್ಲಿ ಬಿಡಲಾಗಿದೆ. ಇದರಿಂದ ರಾಜ್ಯ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರಯಾಗರಾಜ್‌ನಲ್ಲಿ, ಮಳೆ ಹಿನ್ನೆಲೆ ಗಂಗಾ ತೀರದಲ್ಲಿ ಮರಳಿನಲ್ಲಿ ಸಮಾಧಿ ಮಾಡಲಾಗಿದ್ದ ನೂರಾರು ಶವಗಳು ಈಗ ಕಾಣಿಸುತ್ತಿವೆ. ಇದರಿಂದ ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಭಯವನ್ನುಂಟುಮಾಡಿದೆ . ಇನ್ನು ನಾಯಿಗಳು ಸಮಾಧಿಗಳನ್ನು ಅಗೆದು ತಿನ್ನುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.
ಪ್ರಯಾಗರಾಜ್ ನದಿ ತೀರದಲ್ಲಿ ಹೆಣಗಳ ರಾಶಿ
ವಿದೇಶಿ ಸುದ್ದಿ ಸಂಸ್ಥೆಯೊಂದು ಚಿತ್ರೀಕರಿಸಿದ ಡ್ರೋನ್ ತುಣುಕಿನಲ್ಲಿ, ನೂರಾರು ಶವಗಳನ್ನು ಬಿದಿರಿನ ಕೋಲುಗಳಿಂದ ಬೇರ್ಪಡಿಸಿ ಕೇಸರಿ ಬಟ್ಟೆಯಿಂದ ಮುಚ್ಚಿ, ಪ್ರಯಾಗರಾಜ್‌ನ ದಂಡೆಯಲ್ಲಿ ಹೂಳಲಾಗಿದೆ.
ಪ್ರಯಾಗರಾಜ್ ನದಿ ತೀರದಲ್ಲಿ ಹೆಣಗಳ ರಾಶಿ
ಈ ಎಲ್ಲ ಘಟನೆ ನಂತರ ರಾಜ್ಯದ ಎಲ್ಲ ನದಿಗಳ ಸುತ್ತಲೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ ವಾಟರ್ ಪೊಲೀಸರು ನಿರಂತರವಾಗಿ ಗಸ್ತು ತಿರುಗುವಂತೆ ಆದಿತ್ಯನಾಥ್ ಅಧಿಕಾರಿಗಳಿಗೆ ತಿಳಿಸಿದ್ದು, ಶವಗಳನ್ನು ನೀರಿನಲ್ಲಿ ವಿಲೇವಾರಿ ಮಾಡದಂತೆ ನೋಡಿಕೊಳ್ಳುವಂತೆ ಕೇಳಿ ಕೊಂಡಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಉತ್ತರ ಪ್ರದೇಶ ಸರ್ಕಾರ ಧಾರ್ಮಿಕ ಮುಖಂಡರ ಸಹಾಯವನ್ನು ಕೇಳಿದ್ದು, ನದಿಗಳಲ್ಲಿ ದೇಹಗಳನ್ನು ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದಿದ್ದಾರೆ.