ಪಣಜಿ: ಉತ್ತರ ಕನ್ನಡದ ಅಂಕೋಲಾ ಬಳಿ ಅಪಘಾತಕ್ಕಿಡಾಗಿರುವ ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸದ್ಯ ಗೋವಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗೋವಾ ಸಿಎಂ ಹೇಳಿಕೆ ನೀಡಿದ್ದಾರೆ.
ಸಚಿವರ ಆರೋಗ್ಯ ವಿಚಾರಣೆಗೆ ತೆರಳಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಗೋವಾ ವೈದ್ಯಕೀಯ ಕಾಲೇಜ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ಸದ್ಯ ದೆಹಲಿ ಏಮ್ಸ್ ವೈದ್ಯರ ತಂಡ ಗೋವಾಗೆ ಬರುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಅವರನ್ನ ದೆಹಲಿಗೆ ರವಾನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.