ಕರ್ನಾಟಕ

karnataka

ETV Bharat / bharat

ಕೊರೊನಾ 2ನೇ ಅಲೆ: ಆಂಧ್ರದ ಕರಾವಳಿ ಪ್ರದೇಶದಲ್ಲಿ ಸಿಗಡಿ ಉತ್ಪಾದನೆಯಲ್ಲಿ ಕುಸಿತ! - Corona second wave

ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಸಿಗಡಿ ಕೃಷಿ ಇಳಿಕೆ ಕಂಡಿದೆ. ರೈತರು ಅನಿರೀಕ್ಷಿತ ನಷ್ಟವನ್ನು ಅನುಭವಿಸುತ್ತಿದ್ದಾರೆ.

Shrimp production declines in Corona second wave in coastal Andhra Pradesh
Shrimp production declines in Corona second wave in coastal Andhra Pradesh

By

Published : Apr 29, 2021, 9:25 PM IST

Updated : Apr 29, 2021, 9:45 PM IST

ಆಂಧ್ರಪ್ರದೇಶ:ರಾಜ್ಯದ ಕರಾವಳಿ ಪ್ರದೇಶದ ರೈತರು ಹೆಚ್ಚಾಗಿ ಅವಲಂಬಿಸಿರುವ ಹಾಗೂ ಹೆಸರುವಾಸಿಯಾಗಿರುವ ಸಿಗಡಿ ಕೃಷಿಯ ಆಕ್ವಾ ವಲಯವು ಇದೀಗ ಕ್ಷೀಣಿಸುತ್ತಿದೆ. ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಇದು ಸಂಭವಿಸುತ್ತದೆ.

ಇದರ ಪರಿಣಾಮವಾಗಿ ರಾಜ್ಯದಲ್ಲಿ ಸೀಗಡಿ ಕೃಷಿ ಅರ್ಧದಷ್ಟು ಇಳಿಕೆ ಕಂಡಿದೆ. ಕರಾವಳಿ ಪ್ರದೇಶದಲ್ಲಿ ಸಿಗಡಿ ಕೃಷಿ ಕೈಗೊಳ್ಳಲು ರೈತರು ಹಿಂಜರಿಯುತ್ತಿದ್ದಾರೆ. ಜಲಚರಗಳ ರಫ್ತಿನಲ್ಲಿ ಕುಸಿತವು ಆದಾಯದ ನಷ್ಟಕ್ಕೆ ಕಾರಣವಾಗುತ್ತದೆ.

ಕಳಪೆ ಮಾರಾಟದೊಂದಿಗೆ ಬೆಲೆಗಳು ಕುಸಿಯುತ್ತಿದ್ದಂತೆ ಸಿಗಡಿ ರೈತರು ಭಯಭೀತರಾಗಿದ್ದು, ಕೊರೊನಾ ಪರಿಣಾಮದಿಂದಾಗಿ ಅನಿರೀಕ್ಷಿತ ನಷ್ಟವನ್ನು ಅನುಭವಿಸುತ್ತಿದ್ದಾರೆ. ಉತ್ಪಾದನೆಯು ಹಿಂದೆಂದಿಗಿಂತಲೂ ಕುಸಿತ ಕಂಡಿರುವುದರಿಂದ ರೈತರು ಭಾರೀ ನಷ್ಟಕ್ಕೆ ತುತ್ತಾಗಿದ್ದಾರೆ.

Last Updated : Apr 29, 2021, 9:45 PM IST

ABOUT THE AUTHOR

...view details