ಕರ್ನಾಟಕ

karnataka

ETV Bharat / bharat

ಕೊರೊನಾ ಇಳಿಮುಖ: ಕೋವಿಡ್​ ಪ್ರೊಟೋಕಾಲ್​ ಪಾಲನೆಯೊಂದಿಗೆ ಕಾಶಿ ವಿಶ್ವನಾಥ ದೇವಾಲಯ ಪುನಾರಂಭ..!

ದೇಶಾದ್ಯಂತ ಕೊರೊನಾ 2ನೇ ಅಲೆಯ ಆರ್ಭಟ ಅಧಿಕವಾಗಿದ್ದರ ಪರಿಣಾಮ ಅನಿವಾರ್ಯವಾಗಿ ಲಾಕ್​ಡೌನ್​ ಜಾರಿ ಮಾಡಲಾಗಿತ್ತು. ಅದೇ ರೀತಿ ಪವಿತ್ರ ದೇವಾಲಯ, ಮಸೀದಿ, ಚರ್ಚ್​ಗಳನ್ನು ಬಂದ್​ ಮಾಡಲಾಗಿತ್ತು. ಇದೀಗ ಕೊರೊನಾ ಅಲೆ ಕುಸಿತವಾಗುತ್ತಿರುವ ಹಿನ್ನೆಲೆ ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯದ ದರ್ಶನಕ್ಕೆ ಅವಕಾಶ ನೀಡಲಾಗಿದೆ.

shri-kashi-vishwanath-temple-opened-for-devotees-in-varanasi
ಕಾಶಿ ವಿಶ್ವನಾಥ ದೇವಾಲಯ

By

Published : Jun 8, 2021, 6:46 PM IST

Updated : Jun 8, 2021, 8:09 PM IST

ಉತ್ತರ ಪ್ರದೇಶ(ವಾರಾಣಸಿ): ಕೊರೊನಾ 2ನೇ ಅಲೆಯು ದಿನದಿಂದ ದಿನಕ್ಕೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಅನ್​ಲಾಕ್​ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಯುಪಿಯಲ್ಲಿ ಭಾಗಶಃ ಕರ್ಫ್ಯೂ ಸಡಿಲವಾಗಿದ್ದು, ಜೂನ್ 7 ರಿಂದ ವಾರಾಣಸಿಯಲ್ಲಿ ಮಾರುಕಟ್ಟೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅದೇ ರೀತಿ ಇಂದಿನಿಂದ (ಜೂನ್ 8 ) ಶ್ರೀ ಕಾಶಿ ವಿಶ್ವನಾಥ ದೇವಾಲಯದ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಈ ಹಿಂದೆ ಕೊರೊನಾ 2ನೇ ಅಲೆ ಏರುಗತಿಯಲ್ಲಿ ಸಾಗಿದ್ದರ ಪರಿಣಾಮ, 2021ರ ಏಪ್ರಿಲ್ 14 ರಿಂದ ಆರ್‌ಟಿಪಿಸಿಆರ್ ವರದಿ ತಂದವರಿಗೆ ಮಾತ್ರ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಇದೀಗ ಬಹಳ ಸಮಯದ ನಂತರ, ಯಾವುದೇ ಕೋವಿಡ್ -19 ವರದಿಯಿಲ್ಲದೆಯೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಕಾಶಿ ವಿಶ್ವನಾಥ ದೇವಾಲಯ ದರ್ಶನಕ್ಕೆ ಅವಕಾಶ ನೀಡಲಾಗಿದೆ

ಕೊರೊನಾ ಪ್ರೋಟೋಕಾಲ್​ ಅನುಸರಣೆ ಕಡ್ಡಾಯ:ಮಂಗಳವಾರದಿಂದಲೇ (ದಿನಾಂಕ- 8, 2021) ಭಕ್ತರಿಗೆ ದೇವರನ್ನು ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಆದರೆ, ದರ್ಶನಕ್ಕೆ ಬರುವ ಭಕ್ತರು ಸಾಮಾಜಿಕ ಅಂತರ ಹಾಗೂ ಕೊರೊನಾ ಪ್ರೋಟೋಕಾಲ್ ಅನುಸರಿಸಿ ಪ್ರವೇಶ ಮಾಡಬೇಕು ಎಂದು ತಿಳಿಸಲಾಗಿದೆ.

5 ಜನರಿಗೆ ಮಾತ್ರ ಅವಕಾಶ:ದೇವಾಲಯದ ಪ್ರವೇಶಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್​ ಧರಿಸುವುದು ಸೇರಿದಂತೆ, ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಅಲ್ಲದೇ, ದೇವಾಲಯದ ಆವರಣದಲ್ಲಿ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯವಾಗಿ ಭಕ್ತರು ಪಾಲಿಸಲೇಬೇಕು. ಜನಸಮೂಹವು ಮುಂದೆ ಸಾಗುತ್ತಿರುವಾಗ, ಸಾಮಾಜಿಕ ದೂರ ಕಾಯ್ದುಕೊಂಡು ದರ್ಶನಕ್ಕೆ ತೆರಳಬಹುದಾಗಿದೆ. ವಿಶೇಷವಾಗಿ ದೇವಾಲಯದೊಳಗೆ ಯಾವುದೇ ದೇವರ ವಿಗ್ರಹ, ಗೋಡೆ, ಗಂಟೆ ಅಥವಾ ಬೇರೆ ಸ್ಥಳವನ್ನು ಮುಟ್ಟದಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಒಂದು ಸಮಯದಲ್ಲಿ ಕೇವಲ 5 ಜನರಿಗೆ ಮಾತ್ರ ದೇವಾಲಯದ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.

ಗರ್ಭಗುಡಿಗಿಲ್ಲ ಪ್ರವೇಶ: ದೇವಾಲಯದ ಗರ್ಭಗೃಹದಲ್ಲಿ ಯಾವುದೇ ಭಕ್ತರಿಗೆ ಪ್ರವೇಶ ನೀಡಲಾಗುವುದಿಲ್ಲ. ದೇವಾಲಯದ ಪುರೋಹಿತರು ಮತ್ತು ಅರ್ಚಕರು ಯಾರಿಗೂ ಪ್ರಸಾದವನ್ನು ಅರ್ಪಿಸಬಾರದು ಅಥವಾ ತಲೆಯ ಮೇಲೆ ತಿಲಕ ಹಾಕಬಾರದು ಎಂದು ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ. ಕೊಡುಗೆಗಳು ಇತ್ಯಾದಿಗಳನ್ನು ನೇರವಾಗಿ ದೇಣಿಗೆ ಪೆಟ್ಟಿಗೆಯಲ್ಲಿ ಇರಿಸಲು ನಿರ್ದೇಶಿಸಲಾಗಿದೆ.

ಕೊರೊನಾ 2ನೇ ಅಲೆಯ ಕಾರಣಕ್ಕೆ ಏಪ್ರಿಲ್ 14 ರಿಂದ ಮುಚ್ಚಲ್ಪಟ್ಟಿದ್ದ ವಿಶ್ವನಾಥ ದೇವಾಲಯವನ್ನು ಇಂದು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದ್ದು, ಕಾಶಿಯ ಇತರ ದೇವಾಲಯಗಳನ್ನು ಸಹ ಇಂದು ಸಂಜೆ ವೇಳೆಗೆ ತೆರೆಯಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಓದಿ:ಮೊದಲ ಸೋಲಾರ್ ಸ್ಪೇಸ್ ಮಿಷನ್​ ಇಸ್ರೋಗೆ ಬೆನ್ನೆಲುಬಾದ ಉತ್ತರಾಖಂಡ್‌ನ ಏರಿಯಸ್

Last Updated : Jun 8, 2021, 8:09 PM IST

ABOUT THE AUTHOR

...view details