ನವದೆಹಲಿ: ಕೊರೊನಾ ಹಿನ್ನೆಲೆ ಮೇ 1, 2020 ರಿಂದ ಆಗಸ್ಟ್ 31, 2020 ರ ನಡುವೆ ಒಟ್ಟು 4,621 ಶ್ರಮಿಕ್ ವಿಶೇಷ ರೈಲುಗಳು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಜನರು ತಮ್ಮ ತವರು ರಾಜ್ಯಗಳಿಗೆ ತೆರಳಲು ಸೇವೆ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
2020ರ ಮೇನಿಂದ ಆಗಸ್ಟ್ವರೆಗೆ 4621 ಶ್ರಮಿಕ್ ರೈಲುಗಳು ಓಡಾಟ:ರೈಲ್ವೆ ಇಲಾಖೆ ಮಾಹಿತಿ
ಕೊರೊನಾ ಸಮಯದಲ್ಲಿ ಲಾಕ್ಡೌನ್ ಜಾರಿಯಾದ ಮೇಲೆ ತಮ್ಮ ರಾಜ್ಯಗಳಿಗೆ ತೆರಳಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಶ್ರಮಿಕ್ ರೈಲು ಸೇವೆ ನೀಡಿತ್ತು. ಈ ಶ್ರಮಿಕ್ ರೈಲಿನ ಸಂಪೂರ್ಣ ಮಾಹಿತಿಯನ್ನು ಈಗ ಕೇಂದ್ರ ರೈಲ್ವೆ ಇಲಾಖೆ ನೀಡಿದೆ.
2020 ರ ಮೇ 1 ರಿಂದ 2020 ರ ಆಗಸ್ಟ್ 31 ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ರಮಿಕ್ ಸ್ಪೆಷಲ್ ರೈಲುಗಳು 63.19 ಲಕ್ಷ ಪ್ರಯಾಣಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಿದೆ. ಶ್ರಮಿಕ್ ವಿಶೇಷ ರೈಲುಗಳಿಗಾಗಿ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರಗಳು ಕೋರಿದ್ದವು. ಸಾಮಾನ್ಯ ಸಂದರ್ಭಗಳಲ್ಲಿ ಅಂತಹ ವಿಶೇಷ ರೈಲುಗಳನ್ನು ರಾಜ್ಯ ಸರ್ಕಾರ / ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಪೂರ್ಣ ದರಗಳಲ್ಲಿ ಕಾಯ್ದಿರಿಸಲಾಗುತ್ತದೆ. ಇದರಲ್ಲಿ ಸಾಮಾನ್ಯ ಶುಲ್ಕ, ಸೇವಾ ಶುಲ್ಕ, ಖಾಲಿ ಸಾಗಾಟ ಶುಲ್ಕ ಇತ್ಯಾದಿಗಳು ಸೇರಿವೆ.
ಆದರೆ, ಭಾರತೀಯ ರೈಲ್ವೆ ಸಾಮಾನ್ಯ ಶುಲ್ಕದಲ್ಲಿ ಶ್ರಮಿಕ್ ಸ್ಪೆಷಲ್ಸ್ ಕಾಯ್ದಿರಿಸಲು ಅನುಮತಿ ನೀಡಿತ್ತು. ಈ ಸೇವೆಗೆ ರಾಜ್ಯ ಸರ್ಕಾರಗಳು ಅಥವಾ ಅವರ ಅಧಿಕೃತ ಪ್ರತಿನಿಧಿಗಳಿಂದ ಶ್ರಮಿಕ್ ವಿಶೇಷ ರೈಲುಗಳಿಗೆ ಶುಲ್ಕವನ್ನು ಸಂಗ್ರಹಿಸಲಾಗಿದೆ. ರೈಲ್ವೆ ಪ್ರಯಾಣಿಕರಿಂದ ಯಾವುದೇ ಶುಲ್ಕವನ್ನು ನೇರವಾಗಿ ಪಡೆದುಕೊಳ್ಳಲಾಗಿಲಿಲ್ಲ. 2020 ರ ಮೇ 1 ರಿಂದ 2020 ರ ಆಗಸ್ಟ್ 31 ರವರೆಗೆ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ರಾಜ್ಯ ಸರ್ಕಾರಗಳಿಂದ ಅಥವಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳಿಂದ ಅಂದಾಜು 433 ಕೋಟಿ ರೂ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.