ಮುಂಬೈ(ಮಹಾರಾಷ್ಟ್ರ):ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ಗೆ ಮರಣದಂಡನೆ ವಿಧಿಸಬೇಕು ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ. ಈ ಪ್ರಕರಣವನ್ನು ಲವ್ ಜಿಹಾದ್ ಆಯಾಮದಲ್ಲೂ ತನಿಖೆ ಮಾಡಬೇಕು ಎಂದು ಕೋರಿದ್ದಾರೆ.
ಪ್ರಕರಣದ ಹಿಂದೆ ಲವ್ ಜಿಹಾದ್ ಇರುವಂತಿದೆ ಎಂದು ನನಗೆ ಅನುಮಾನವಿದೆ. ನಾವು ಅಫ್ತಾಬ್ಗೆ ಮರಣದಂಡನೆ ವಿಧಿಸಬೇಕು ಎಂಬುದು ನಮ್ಮ ಬೇಡಿಕೆ. ದೆಹಲಿ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. ಇದು ಸರಿಯಾದ ರೀತಿಯಲ್ಲಿ ನಡೆಯಬೇಕು. ಶ್ರದ್ಧಾ ಆಕೆಯ ಅಂಕಲ್ ಜೊತೆ ಹೆಚ್ಚು ಆತ್ಮೀಯವಾಗಿದ್ದಳು. ಅಲ್ಲದೇ, ಆಕೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾನು ಎಂದಿಗೂ ಅಫ್ತಾಬ್ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಪ್ರಕರಣ ಸಂಬಂಧ ನಾನು ಮುಂಬೈನ ವಸೈನಲ್ಲಿ ಮೊದಲು ದೂರು ಸಲ್ಲಿಸಿದೆ ಎಂದು ಶ್ರದ್ಧಾ ತಂದೆ ವಿಕಾಸ್ ವಾಕರ್ ತಿಳಿಸಿದ್ದಾರೆ.
ಪ್ರಕರಣ ತನಿಖೆಯಲ್ಲಿ ಆರೋಪಿ ಅಫ್ತಾಬ್ ಪೂನವಾಲಾ ಫುಡ್ ಬ್ಲಾಕರ್ ಆಗಿದ್ದು, ದೆಹಲಿಯ ಕಾಲ್ ಸೆಂಟರ್ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ. ರಾಷ್ಟ್ರ ರಾಜಧಾನಿಯ ಛತರ್ಪುರ್ನಲ್ಲಿ ಫ್ಯಾಟ್ ಬಾಡಿಗೆ ಪಡೆದಿದ್ದ ಆತ ಶ್ರದ್ಧಾಳನ್ನು ಹತ್ಯೆ ಮಾಡಿದ್ದ. ಇವರಿಬ್ಬರು ಆಗ್ಗಿಂದಾಗ್ಗೆ ಜಗಳ ಆಡುತ್ತಿದ್ದರು ಎಂಬುದು ಕೂಡ ತನಿಖೆ ವೇಳೆ ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ 2019ರಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದ ಈ ಜೋಡಿಗಳು 2022ರಲ್ಲಿ ದೆಹಲಿಗೆ ವಾಸ್ತವ್ಯ ಬದಲಾಯಿಸಿದ್ದರು. ಇದಕ್ಕೂ ಮುನ್ನ ಅವರು ಮಹಾರಾಷ್ಟ್ರದಲ್ಲಿದ್ದರು. ಒಟ್ಟೊಟ್ಟಿಗೆ ಅನೇಕ ಕಡೆ ಪ್ರವಾಸ ಯೋಜನೆಯಡಿ ಊರು ಸುತ್ತಿದ್ದರಂತೆ.