ನವದೆಹಲಿ:ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ವಿಚಾರಣೆಯನ್ನು ದೆಹಲಿಯ ಸಾಕೇತ್ ನ್ಯಾಯಾಲಯವು ಸೆಷನ್ ಕೋರ್ಟ್ಗೆ ವರ್ಗಾಯಿಸಿದೆ. ಪ್ರಿಯತಮೆಯನ್ನು ಅತ್ಯಂತ ಭೀಕರವಾಗಿ ಕೊಂದ ಪಾತಕಿ ಅಫ್ತಾಬ್ ಅಮಿನ್ ಪುನವಾಲಾನನ್ನು ಫೆಬ್ರವರಿ 24ರಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.
"ದಾಖಲೆಗಳ ಪರಿಶೀಲನೆ ನಡೆದಿದೆ. ಐಪಿಸಿ ಸೆಕ್ಷನ್ 302 (ಕೊಲೆ) ಅಡಿ ವಿಚಾರಣೆಯನ್ನು ಸೆಷನ್ ಕೋರ್ಟ್ ಆರಂಭಿಸಲಿದೆ. ಇದಕ್ಕೂ ಮೊದಲು ಫೆಬ್ರವರಿ 24ರಂದು ಮಧ್ಯಾಹ್ನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಗುವುದು" ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಲ್ ಶುಕ್ಲಾ ತಿಳಿಸಿದರು.
ವಿಚಾರಣೆಯ ವೇಳೆ ಸಿಆರ್ಪಿಸಿ (ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್) ಪುಸ್ತಕ ಹಾಗೂ ಪೆನ್ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು. ಇಲ್ಲಿ ನೋಟ್ ಮಾಡಿಕೊಳ್ಳುವ ವಿಷಯದಿಂದ ತನ್ನ ಸಮಾಲೋಚನೆಗೆ ಸಹಾಯವಾಗಲಿದೆ ಎಂದು ಪುನಾವಾಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಕ್ಕೂ ಮುನ್ನ ಈ ಸಂಬಂಧ ನೇರವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಫೆ.13ರಂದು ಪುನಾವಾಲ ಚಾರ್ಜ್ಶೀಟ್ನ ಸರಿಯಾದ ಸಾಫ್ಟ್ ಕಾಪಿಯೊಂದಿಗೆ ಉನ್ನತ ಶಿಕ್ಷಣ ಮುಂದುವರೆಸಲು ಶೈಕ್ಷಣಿಕ ಸರ್ಟಿಫಿಕೇಟ್ಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಜೊತೆಗೆ ಸಹ ಜೀವನ ನಡೆಸುತ್ತಿದ್ದ ಶ್ರದ್ದಾ ವಾಕರ್ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಜನವರಿ 24ರಂದು 6 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದರು. ಇದಾದ ಬಳಿಕ ನ್ಯಾಯಾಲಯ 14 ದಿನಗಳ ಕಾಲ ಕಸ್ಟಡಿಯನ್ನು ವಿಸ್ತರಿಸಿತ್ತು. ಈ 6 ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ಫಾರೆನ್ಸಿಕ್ ಮತ್ತು ಎಲೆಕ್ಟ್ರಾನಿಕ್ನ ಸುಮಾರು 100 ಸಾಕ್ಷ್ಯಾಧಾರಗಳನ್ನು ಬಳಲಾಗಿತ್ತು.
ತಿಹಾರ್ ಜೈಲಿನಲ್ಲಿದ್ದ ಪೂನವಾಲ ಉನ್ನತ ಶಿಕ್ಷಣವನ್ನು ಪಡೆಯುವ ಸಂಬಂಧ ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ತಮ್ಮ ಶೈಕ್ಷಣಿಕ ದಾಖಲೆಗಳನ್ನು ನೀಡುವ ಜೊತೆಗೆ ಪೆನ್, ಪೆನ್ಸಿಲ್ ಮತ್ತು ನೋಟ್ಬುಕ್ ನೀಡಬೇಕು. ಎರಡನೇ ಅರ್ಜಿಯಲ್ಲಿ ಸರಿಯಾದ ಚಾರ್ಚ್‌ಶೀಟ್ ಕಾಪಿ ನೀಡುವಂತೆ ಮನವಿ ಸಲ್ಲಿಸಿದ್ದಾನೆ.
ಚಾರ್ಜ್‌ಶೀಟ್ ಕಾಪಿ ಅಥವಾ ಪೆನ್ ಡ್ರೈವ್ ಸರಿಯಾಗಿಲ್ಲ. ಇದನ್ನು ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಅಫ್ತಾಬ್ ಪರ ವಕೀಲರು ತಿಳಿಸಿದ್ದರು. ಪೆನ್ ಡ್ರೈವ್ ಓವರ್ ಲೋಡ್ ಆಗಿದ್ದು, ಅದನ್ನು ಅಡ್ವಾನ್ಸ್ಡ್ ಕಂಪ್ಯೂಟರ್ಗೆ ಅದು ಬೆಂಬಲಿಸುತ್ತಿಲ್ಲ. ಜೊತೆಗೆ ವಿಡಿಯೋ ಕೂಡ ಸರಿಯಾಗಿಲ್ಲ ಎಂದು ತಿಳಿಸಿದ್ದ. ಚಾರ್ಜ್ ಶೀಟ್ನಲ್ಲಿ ದಾಖಲಾಗಿರುವ ವಿಡಿಯೋ ಫೂ ಟೆಜ್ ಅನ್ನು ಸರಿಯಾಗಿ ನೀಡುವಂತೆ ಮತ್ತು ಸಾಫ್ಟ್ ಕಾಪಿಯನ್ನು ಮುಚ್ಚಿದ ಪತ್ರದಲ್ಲಿ ನೀಡುವಂತೆ ಆತ ಮನವಿ ಮಾಡಿದ್ದ. ಇದಕ್ಕೂ ಮೊದಲು ಆತ ಜೈಲಿನಲ್ಲಿ ಚಳಿಯಾಗುತ್ತಿದ್ದ ಬಟ್ಟೆ ಮತ್ತು ಕಾನೂನಿನ ಪುಸ್ತಕ ಕೊಳ್ಳುವುದಕ್ಕೆ ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದನು.
ಇದನ್ನೂ ಓದಿ:ಶ್ರದ್ಧಾ ವಾಕರ್ ಹತ್ಯೆ ಕೇಸ್: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್