ನವದೆಹಲಿ:ಕೊರೊನಾಸಾಂಕ್ರಾಮಿಕ ರೋಗದ ಮಧ್ಯೆ ಸಾಮಾಜಿಕ ಅಂತರ ಕಾಪಾಡಲು ಹೊರಡಿಸಿರುವ ಮಾನದಂಡಗಳನ್ನು ಕಾಯ್ದುಕೊಳ್ಳದ ಕಾರಣಕ್ಕಾಗಿ ರಾಜ್ಯ ಅಬಕಾರಿ ಇಲಾಖೆ ರಾಷ್ಟ್ರ ರಾಜಧಾನಿಯಲ್ಲಿನ ಮದ್ಯದಂಗಡಿಯೊಂದಕ್ಕೆ ಶೋಕಾಸ್ ನೋಟಿಸ್ ನೀಡಿದೆ. ಭಾರತೀಯ ಮದ್ಯ-ಬಿಯರ್‌ನ ಚಿಲ್ಲರೆ ಮಾರಾಟಗಾರರಿಗೆ ಎಲ್ -6 ಪರವಾನಗಿಯನ್ನು ನೀಡಲಾಗುತ್ತದೆ. ಅದನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೊರೊನಾ ಮಾರ್ಗಸೂಚಿ ಉಲ್ಲಂಘನೆ; ಮದ್ಯದಂಗಡಿಗೆ ಶೋಕಾಸ್ ನೋಟೀಸ್ - ಕೊರೊನಾ ಮಾರ್ಗಸೂಚಿ
ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದ ದೆಹಲಿಯ ಮದ್ಯದಂಗಡಿಯೊಂದಕ್ಕೆ ರಾಜ್ಯ ಅಬಕಾರಿ ಇಲಾಖೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಜೂನ್ 22 ರಂದು ಡಿಸಿಸಿಡಬ್ಲ್ಯುಎಸ್ ಅಂಗಡಿ ಸಂಖ್ಯೆ 4058ಗೆ ನೋಟಿಸ್ ನೀಡಲಾಗಿದೆ. ಅಬಕಾರಿ ಉಪಆಯುಕ್ತರು, ಅಂಗಡಿಯ ಎಲ್ -6 ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದಾರೆ. ದೆಹಲಿ ಅಬಕಾರಿ ಕಾಯ್ದೆ 2009 ಮತ್ತು ದೆಹಲಿ ಅಬಕಾರಿ ನಿಯಮಗಳು 2010 ರ ಅಡಿಯಲ್ಲಿ ಲಿಖಿತ ಸಲ್ಲಿಕೆ ಮತ್ತು ಅಗತ್ಯ ದಾಖಲೆಗಳು ವಿಫಲವಾದಾಗ ಅಧಿಕೃತ ಪ್ರತಿನಿಧಿಯ ಮೂಲಕ ಸಂಜೆ 4 ಗಂಟೆಗೆ 30-06-21ರಂದು ಹಾಜರಾಗುವಂತೆ M / s ಡಿಸಿಸಿಡಬ್ಲ್ಯೂಎಸ್(ಅಂಗಡಿ ಪರವಾನಗಿಯಲ್ಲಿರುವ ಹೆಸರು)ಗೆ ನಿರ್ದೇಶಿಸಲಾಗಿದೆ.
ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಸಾಕಷ್ಟು ಮಾರ್ಷಲ್ ಮತ್ತು ಸಿಬ್ಬಂದಿಯನ್ನು ನಿಯೋಜಿಸುವಂತೆ ದೆಹಲಿ ಸರ್ಕಾರವು ಈ ಹಿಂದೆ ನಿರ್ದೇಶನ ನೀಡಿತ್ತು. ಆದರೂ ನಿಯಮ ಉಲ್ಲಂಘಿಸಿದ ಮದ್ಯದಂಗಡಿಗೆ ನೋಟಿಸ್ ನೀಡಲಾಗಿದೆ.