ಕರ್ನಾಟಕ

karnataka

ETV Bharat / bharat

ದಿನಸಿ ಅಂಗಡಿ ಮಾಲೀಕನ ಕೊಂದು ಫ್ರೀಜರ್‌ನಲ್ಲಿ ಬಚ್ಚಿಟ್ಟರು! - ಉತ್ತರ ಪ್ರದೇಶದ ಕಾನ್ಪುರ

ದಿನಸಿ ಅಂಗಡಿಯ ಮಾಲೀಕನ ಮೃತದೇಹ ಫ್ರೀಜರ್‌ನಲ್ಲಿ ಪತ್ತೆ. ಉತ್ತರ ಪ್ರದೇಶದ ಕಾನ್ಪುರ ಹೊರಭಾಗದಲ್ಲಿ ಘಟನೆ.

Kanpur Murder
ಫ್ರೀಜರ್‌ನಲ್ಲಿ ದಿನಸಿ ಅಂಗಡಿಯ ಮಾಲೀಕನ ಮೃತ ದೇಹ ಪತ್ತೆ

By

Published : Nov 14, 2022, 11:12 AM IST

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಹೊರಭಾಗದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ದಿನಸಿ ಅಂಗಡಿಯ ಮಾಲೀಕನನ್ನು ಕೊಂದು ಶವವನ್ನು ಫ್ರೀಜರ್‌ನಲ್ಲಿ ಬಚ್ಚಿಟ್ಟು ಹಂತಕರು ಪರಾರಿಯಾಗಿದ್ದಾರೆ.

ಮೂಲಗಳ ಪ್ರಕಾರ, ಬಿಧನು ಪೊಲೀಸ್ ಠಾಣೆ ವ್ಯಾಪ್ತಿಯ ಖಂಡೇಶ್ವರ ಗ್ರಾಮದ ನಿವಾಸಿ ಕುಬೇರ್ ಸಿಂಗ್ (52) ಮೃತರು. ಇವರು ಖಂಡೇಶ್ವರದಲ್ಲಿ ದಿನಸಿ ಅಂಗಡಿ ಹೊಂದಿದ್ದರು. ಕುಬೇರ್ ಸಿಂಗ್ ಅವರ ಪತ್ನಿ 15 ವರ್ಷಗಳ ಹಿಂದೆ ಮೃತಪಟ್ಟಿದ್ದು, ಮಗಳಿಗೆ ವಿವಾಹವಾಗಿತ್ತು. ಪ್ರಸ್ತುತ ಅವರು ತನ್ನ ಖಂಡೇಶ್ವರದಲ್ಲಿರುವ ತನ್ನ ಮನೆಯಲ್ಲಿ ವಾಸಿಸುತ್ತಿದ್ದರು.

ಕಳೆದ 4 ದಿನಗಳಿಂದ, ಕುಬೇರ್ ಸಿಂಗ್ ತನ್ನ ಕಾಣಿಸದೆ ಇದ್ದಾಗ ಸ್ಥಳೀಯರು ಈ ಬಗ್ಗೆ ಕುಬೇರ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಅವರ ಶವ ಫ್ರೀಜರ್​ನಲ್ಲಿ ಪತ್ತೆಯಾಗಿದೆ.

ಕೂಡಲೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗದೆ ಎಂದು ಕಾನ್ಪುರ ಎಸ್​ಪಿ ತೇಜ್ ಸ್ವರೂಪ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗಾಜಿಯಾಬಾದ್‌ನಲ್ಲಿ ನೇಣು ಬಿಗಿದು ನಾಯಿಯನ್ನು ಕೊಂದ ಪಾಪಿಗಳು! ವಿಡಿಯೋ

ABOUT THE AUTHOR

...view details