ಕರ್ನಾಟಕ

karnataka

By

Published : Dec 31, 2021, 7:11 AM IST

Updated : Dec 31, 2021, 7:16 AM IST

ETV Bharat / bharat

ನಿರ್ಬಂಧದ ನಡುವೆಯೂ ದೆಹಲಿಯಲ್ಲಿ ಅಂಗಡಿ ತೆರೆದ ಮಾಲೀಕನಿಗೆ ಬಿತ್ತು 50,000 ರೂ. ದಂಡ

ದೆಹಲಿಯ ಕರೋಲ್ ಬಾಗ್‌ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕನಿಗೆ 50,000 ರೂ. ದಂಡ ವಿಧಿಸಲಾಗಿದೆ.

A shopkeeper fined Rs 50,000 for opening a shop on wrong day in Delhi
ನಿರ್ಬಂಧದ ನಡುವೆಯೂ ದೆಹಲಿಯಲ್ಲಿ ಅಂಗಡಿ ತೆರೆದ ಮಾಲೀಕನಿಗೆ ಬಿತ್ತು 50,000 ರೂ. ದಂಡ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಕೇಸ್​ಗಳ ಜೊತೆ ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ​ಇದಕ್ಕೆ ಕಡಿವಾಣ ಹಾಕಲು ಅರವಿಂದ್​ ಕೇಜ್ರಿವಾಲ್​ ಸರ್ಕಾರ ಲಾಕ್​ಡೌನ್​ ತರಹದ ನಿರ್ಬಂಧ ಹೇರಿದೆ.

ಈ ನಿರ್ಬಂಧಗಳಲ್ಲಿ ಒಂದೇನೆಂದರೆ, ನಗರದಲ್ಲಿನ ಅಂಗಡಿಗಳು ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು 'ಸಮ-ಬೆಸ' (ಉದಾಹರಣೆಗೆ 2,4,6,8 ಹಾಗು 1,3,5,7) ನಿಯಮದ ಆಧಾರದ ಮೇಲೆ ಮಾತ್ರ ತೆರೆಯಬೇಕು. ಅಂದರೆ, ಒಂದು ದಿನ ನಿಮ್ಮ ಅಂಗಡಿ ತೆರೆದರೆ ಆ ದಿನ ನಿಮ್ಮ ಪಕ್ಕದ ಶಾಪ್​ ಓಪನ್​ ಮಾಡುವಂತಿಲ್ಲ. ಜನಸಂದಣಿ ನಿಯಂತ್ರಿಸಲು ಈ ನಿಯಮವನ್ನು ಹೇರಲಾಗಿದೆ.

ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಉಪವಿಭಾಗೀಯ ಮ್ಯಾಜಿಸ್ಟ್ರೇಟ್

ಆದರೆ, ದೆಹಲಿಯ ಕರೋಲ್ ಬಾಗ್‌ ಪ್ರದೇಶದಲ್ಲಿ ಪ್ರೇಮ್ ಸಿಂಗ್ ಎಂಬವರು ತಮ್ಮ ಸರತಿಯಲ್ಲದ ದಿನದಂದು (ಸಮ ದಿನದಂದು) ಅಂಗಡಿ ಓಪನ್​ ಮಾಡಿ ವ್ಯಾಪಾರ ನಡೆಸಿದ್ದಾರೆ. ಡಿಢೀರನೆ ಇತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡು 50,000 ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: Delhi Night Curfew: ಕೊರೊನಾ ಹೆಚ್ಚಳ, ರಾಷ್ಟ್ರ ರಾಜಧಾನಿಯಲ್ಲೂ ನೈಟ್​ ಕರ್ಫ್ಯೂ ಜಾರಿ

ಇನ್ನು ನಿಯಮ ಉಲ್ಲಂಘಿಸಿ ಸೀಲಂಪುರ್ ಪ್ರದೇಶದಲ್ಲಿ ತೆರೆದಿದ್ದ ವಾರದ ಮಾರುಕಟ್ಟೆಗಳನ್ನು ಮುಂದಿನ ಆದೇಶದವರೆಗೆ ಅಧಿಕಾರಿಗಳು ಮುಚ್ಚಿಸಿದ್ದು, ಅಗತ್ಯ ವಸ್ತುಗಳ ವ್ಯಾಪಾರದ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದರು.

ದೆಹಲಿಯಲ್ಲಿ ಕೋವಿಡ್, ಮುನ್ನೆಚ್ಚರಿಕೆ ಕ್ರಮಗಳು:

ದೆಹಲಿಯಲ್ಲಿ ನಿನ್ನೆ ಒಂದೇ ದಿನ 1,313 ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, ಈ ಪೈಕಿ 25 ಒಮಿಕ್ರಾನ್​ ಪ್ರಕರಣಗಳಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 263 ಒಮಿಕ್ರಾನ್​ ಸೋಂಕಿತರು ಪತ್ತೆಯಾಗಿದ್ದಾರೆ. ಎರಡನೇ ಅಲೆಯಲ್ಲಿ ಉಲ್ಬಣಗೊಂಡ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡಿದ್ದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಈ ಬಾರಿ ಕೂಡ ಸಂಭಾವ್ಯ 3ನೇ ಅಲೆ ತಡೆಯಲು ಒಂದೊಂದೇ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದಾರೆ. ಈಗಾಗಲೇ ನೈಟ್​ ಕರ್ಫ್ಯೂ ಕೂಡ ಜಾರಿಯಲ್ಲಿದೆ.

Last Updated : Dec 31, 2021, 7:16 AM IST

ABOUT THE AUTHOR

...view details