ಶೋಪಿಯಾನ್, ಜಮ್ಮು ಕಾಶ್ಮೀರ:ಕಣಿವೆ ನಾಡಿನಲ್ಲಿ ಮತ್ತೊಮ್ಮೆ ಭಯೋತ್ಪಾದಕರಿಗೆ ಸೇನೆ ಬಿಸಿ ಮುಟ್ಟಿಸಿದೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಅಪರಿಚಿತ ಭಯೋತ್ಪಾದಕನನ್ನು ಸೇನೆ ಗುಂಡಿಕ್ಕಿ ಕೊಂದಿದೆ.
ಶೋಪಿಯಾನ್ ಜಿಲ್ಲೆಯ ಶೀರ್ಮಾಲ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಫೈರಿಂಗ್ ನಂತರ ಭಯೋತ್ಪಾದಕರ ಅಡಗುದಾಣವನ್ನು ಸುತ್ತುವರೆದ ಸೇನೆ ಶರಣಾಗುವಂತೆ ಭಯೋತ್ಪಾದಕರಿಗೆ ಸೂಚನೆ ನೀಡಿದೆ.