ಸೇನಾ ವಾಹನ ಅಪಘಾತ: ಇಬ್ಬರು ಯೋಧರ ಸಾವು, ನಾಲ್ವರು ಗಂಭೀರ - ಮಿಲಿಟರಿ ವಾಹನ ಅಪಘಾತ ಇಬ್ಬರು ಯೋಧರು ಹುತಾತ್ಮ
ಶೋಪಿಯಾನ್ನಲ್ಲಿ ಯೋಧರನ್ನು ಹೊತ್ತು ಸಾಗುತ್ತಿದ್ದ ವಾಹನವೊಂದು ಅಪಘಾತಕ್ಕೀಡಾಗಿ ಇಬ್ಬರು ಸಾವಿಗೀಡಾಗಿದ್ದಾರೆ.
Army Vehicle Accident in shopian
ಶೋಪಿಯಾನ್(ಜಮ್ಮು-ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ನಲ್ಲಿ ಭಾರತೀಯ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಪರಿಣಾಮ, ಇಬ್ಬರು ಯೋಧರು ದುರ್ಮರಣಕ್ಕೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ಶೋಪಿಯಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಶ್ರೀನಗರ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
Last Updated : Apr 14, 2022, 6:04 PM IST