ಅಹಮದಾಬಾದ್( ಗುಜರಾತ್):2017ರಲ್ಲಿ ಅಂಗಡಿ ಮಾಲೀಕ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಹ್ಯಾಂಡ್ ಫ್ರೀ ಡಿವೈಸ್ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಅಪರಾಧಿ ಜಗದೀಶ್ ಛನಬಾಯಿ ಪರ್ಮಾರ್, ಅಂಗಡಿ ಮಾಲೀಕ ಅನಿಲ್ ರಾಮ್ತೇಜ್ ಚವರ್ಸಿಯಾಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹಲ್ಲೆ ಮಾಡಿದ್ದ.
ಈ ಪ್ರಕರಣದಲ್ಲಿ ಗಂಭೀರ ಅಪರಾಧ ನಡೆದಿರುವುದನ್ನು ನ್ಯಾಯಾಲಯ ಗಮನಿಸಿ, ಇಂತಹ ಅಪರಾಧವನ್ನು ಲಘುವಾಗಿ ಪರಿಗಣಿಸಲಾಗದು, ನ್ಯಾಯದ ಹಿತದೃಷ್ಟಿಯಿಂದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಪರಾಧಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿದೆ.
ಏನಿದು ಪ್ರಕರಣ?:2017ರ ಫೆ. 24ರಂದು ನವ ವದ್ಜ್ನಲ್ಲಿನ ಅಂಗಡಿ ಮಾಲೀಕನಾದ ಅನಿಲ್ ರಾಮ್ತೇಜ್ ಛವರ್ಸಿಯಾ ಮೇಲೆ ಜಗದೀಶ್ ಛನಬಾಯಿ ಪರ್ಮಾರ್ ಎಂಬ ರಾಡ್‌ನಿಂದ ಬಲವಾಗಿ ಒಡೆದಿದ್ದು, ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಈ ಪ್ರಕರಣ ಸಂಬಂದ ವಜ್ರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ಪರ್ಮಾರ್ನನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ದಿಲೀಪ್‌ಸಿನ್ಹ್ ಠಾಕೂರ್ ಅವರು ಅನೇಕ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದರು. ಜೊತೆಗೆ ಹಲವು ಸಾಕ್ಷ್ಯಗಳನ್ನು ಹಾಜರುಪಡಿಸಿದರು. ಈ ವೇಳೆ ಆರೋಪಿ ಉದ್ದೇಶಪೂರ್ವಕವಾಗಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲ್ಲುವ ಪ್ರಯತ್ನ ನಡೆದಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೂ ಮುಂದೆ ಕೂಡ ಇದೇ ರೀತಿಯ ಅನೇಕ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸಿದ್ದರು. ಆದರೆ, ನವ ವದ್ಜ್ ಪ್ರಕರಣ ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು. ಆರೋಪಿಯ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು. ಈ ಹಿನ್ನೆಲೆ ಆರೋಪಿ ಪರ್ಮಾರ್ ನನ್ನು ತನಿಖೆಗೆ ಒಳಪಡಿಸಲಾಗಿತ್ತು. ನಗರದಲ್ಲಿ ಆಗಿರುವ ಮೊದಲ ಕೊಲೆ ಯತ್ನ ಪ್ರಕರಣ ಇದು ಆಗಿಲ್ಲ. ಇದಕ್ಕಿಂತ ಮೊದಲು ಅನೇಕ ಕೊಲೆಗಳು ಈ ಸ್ಥಳದಲ್ಲಿ ನಡೆದಿದೆ. ಗ್ರಾಹಕರ ದೌರ್ಜನ್ಯವನ್ನು ನಿಲ್ಲಿಸಬೇಕು ಎಂಬ ಉದ್ದೇಶದಿಂದ ಕಳೆದ ಕೆಲವು ದಿನಗಳಿಂದ ಪೊಲೀಸರು ವಿಶೇಷ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಗ್ರಾಹಕನ ದೌರ್ಜನ್ಯ ಗಂಭೀರ ಮಟ್ಟದಲ್ಲಿರುವುದನ್ನು ಗಮನಿಸಿ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ.
ಹರಿಯಾಣದಲ್ಲಿ ಯುವತಿಯ ಮೇಲೆ ದೌರ್ಜನ್ಯ:ಬಲ್ಬಗ್ರಾಹ್: ಯುವತಿಯನ್ನ ಕಿಡ್ನಾಪ್ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಯುವಕನೊಬ್ಬ ಯುವತಿಯನ್ನು ಕಾರಿನ ಕೆಳಗೆ ಎಳೆದೊಯ್ದಿಲು ಯತ್ನಿಸಿರುವ ಘಟನೆ ನಡೆದಿದೆ. ಬ್ಲಬಗ್ರಾಹ್ ಜಿಲ್ಲೆಯ ಟಿಗೋನ್ ಗ್ರಾಮದಲ್ಲಿ ಕಾಲೇಜಿನಿಂದ ಮನೆ ಮರಳುತ್ತಿದ್ದ ಯುವತಿಯನ್ನು ಕಿಡ್ನಾಪ್ ಮಾಡುವ ಪ್ಲಾನ್ ಮಾಡಲಾಗಿತ್ತು . ಈ ದೃಶ್ಯಗಳು ಸಿಸಿಟಿವಿಯಲ್ಲೂ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ಟೈಗೊನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜವಾಲಿ ಗ್ರಾಮದ ನಿವಾಸಿ ವಿದ್ಯಾರ್ಥಿ ಮೇಲೆ ಈ ದೌರ್ಜನ್ಯ ನಡೆಸಲಾಗಿದೆ. ಈಕೆ ಅದೇ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ ಎಂಎ ಅಂತಿಮ ವರ್ಷ ಅಧ್ಯಯನ ಮಾಡುತ್ತಿದ್ದರು.
ಇದನ್ನೂ ಓದಿ: 'ದರ್ಶನ್ಗೆ ಭಯಪಡಿಸಲು ನಾನು ಕಾರು ಚಲಾಯಿಸಿದೆ..' ಪೊಲೀಸರಿಗೆ ಪ್ರಿಯಾಂಕಾ ಹೇಳಿಕೆ