ತರ್ನ್ ತರನ್:ಪಂಜಾಬ್ನ ತರ್ನ್ ತರನ್ನಲ್ಲಿ ದರೋಡೆಕೋರರು ಮತ್ತು ಪೊಲೀಸರ ನಡುವೆ ಗುರುವಾರ (ನಿನ್ನೆ) ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ದರೋಡೆಕೋರರು ಪೊಲೀಸರ ಗುಂಡಿನ ದಾಳಿಯಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ.
ಕೂಡಲೇ ಗಾಯಾಳು ದರೋಡೆಕೋರ ರಾಜು ಮತ್ತು ಆತನ ಸಹಚರನನ್ನು ಪೊಲೀಸರು ಸೆರೆಹಿಡಿದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೆರೆಯಾದ ಆರೋಪಿ ಇಲ್ಲಿಯ ಸಂಘ ಗ್ರಾಮದ ನಿವಾಸಿ ಚರಂಜಿತ್ ಅಲಿಯಾಸ್ ರಾಜು ಶೂಟರ್ ಮತ್ತು ಆತನ ಸಹಚರ ಇಬಾನ್ ಗ್ರಾಮದ ನಿವಾಸಿ ಪರ್ಮಿಂದರ್‌ದೀಪ್ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಮಾಹಿತಿ: ನಿನ್ನೆ ತಡರಾತ್ರಿ ರಾಜು ಶೂಟರ್ ತನ್ನ ಸಹಚರ ಪರ್ಮಿಂದರ್ ಜೊತೆ ಸೇರಿ ದರೋಡೆ ನಡೆಸಲು ಸಂಚು ರೂಪಿಸಿ ಬೈಕ್ನಲ್ಲಿ ತೆರಳುತ್ತಿದ್ದ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಗುರುದ್ವಾರ ಬೀಡ್ ಸಾಹಿಬ್‌ನಿಂದ ಕಾಸೆಲ್ ಗ್ರಾಮಕ್ಕೆ ಹೋಗುವ ರಸ್ತೆಯನ್ನು ತಡೆದಿದ್ದರು. ಇದೇ ವೇಳೆ, ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದ ಈ ಇಬ್ಬರನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಇದನ್ನು ಕಂಡ ಇಬ್ಬರು ಪೊಲೀಸರ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ.