ಚಂಡೀಗಢ:ರಾಜ್ಯದಕಪುರ್ತಲಾ ಜಿಲ್ಲೆಯಲ್ಲಿ ನಿಹಾಂಗ್ ಗುಂಪಿನ ಸದಸ್ಯರು ಗುಂಡು ಹಾರಿಸಿದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್ ಸಾವನ್ನಪ್ಪಿದ್ದು, ಇಬ್ಬರು ಇತರೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಗುರುದ್ವಾರದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಸುಲ್ತಾನ್‌ಪುರ ಲೋಧಿಯಲ್ಲಿ ನಿಹಾಂಗ್ (ಸಾಂಪ್ರದಾಯಿಕ ಶಸ್ತ್ರಸಜ್ಜಿತ ಸಿಖ್ಖರು) ಗುಂಪಿನ ಕೆಲವು ಸದಸ್ಯರ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ.
ಪೊಲೀಸರು ರಸ್ತೆಯಲ್ಲಿ ನಿಂತಿದ್ದಾಗ ನಿಹಾಂಗ್‌ಗಳು ಗುಂಡು ಹಾರಿಸಿದ್ದಾರೆ. ಒಬ್ಬ ಕಾನ್‌ಸ್ಟೆಬಲ್ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡರು ಎಂದು ಕಪುರ್ತಲಾ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಚೇರಿ) ತೇಜ್‌ಬೀರ್ ಸಿಂಗ್ ಹುಂದಾಲ್ ಹೇಳಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಗುರುದ್ವಾರವನ್ನು ಅತಿಕ್ರಮಣ ಮಾಡಿದ ಆರೋಪದಲ್ಲಿ ನಿಹಾಂಗ್ ಗುಂಪಿನ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ. ಗುರುದ್ವಾರದ ಆವರಣವನ್ನು ತೆರವುಗೊಳಿಸಲು ಹೋದಾಗ ನಿಹಾಂಗ್ ಗುಂಪಿನವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಕನಿಷ್ಠ 30 ನಿಹಾಂಗ್‌ಗಳು ಇನ್ನೂ ಗುರುದ್ವಾರದೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಘಟನೆಗಳು-ಭಗ್ನಪ್ರೇಮಿಯಿಂದ ಗುಂಡಿನ ದಾಳಿ:ಒಂದೇ ಕುಟುಂಬದ ಆರು ಜನರ ಮೇಲೆ ಭಗ್ನಪ್ರೇಮಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಲಖಿಸರಾಯ್ ನಗರದ ಪಂಜಾಬಿ ಪ್ರದೇಶದಲ್ಲಿ ನಿನ್ನೆ (ಬುಧವಾರ) ನಡೆದಿತ್ತು. ಮೂವರು ಸಾವನ್ನಪ್ಪಿ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ರಾಜಧಾನಿಯ ಪಿಎಂಸಿಎಚ್‌ಯಲ್ಲಿ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ಅಧಿಕಾರಿಗಳು, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಮಾಜಿ ಶಿಕ್ಷಣ ಸಚಿವರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ₹50 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ!