ಕರ್ನಾಟಕ

karnataka

ETV Bharat / bharat

ಪುಣೆ: ಕುಖ್ಯಾತ ದರೋಡೆಕೋರ​​ ಶರದ್ ಮೊಹೋಲ್ ಹತ್ಯೆ - shooting attack

ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ದರೋಡೆಕೋರ ಶರದ್ ಮೊಹೋಲ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ದರೋಡೆಕೋರ ಶರದ್ ಮೊಹೋಲ್
ದರೋಡೆಕೋರ ಶರದ್ ಮೊಹೋಲ್

By ETV Bharat Karnataka Team

Published : Jan 5, 2024, 7:59 PM IST

ಪುಣೆ(ಮಹಾರಾಷ್ಟ್ರ): ಕುಖ್ಯಾತ ದರೋಡೆಕೋರ, ಗ್ಯಾಂಗ್​​ಸ್ಟರ್​​ ಶರದ್ ಮೊಹೋಲ್ ಎಂಬಾತನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಮೂರು ಸುತ್ತು ಗುಂಡು ಹಾರಿಸಿದ ಘಟನೆ ಪುಣೆಯ ಕೊತ್ರುದ್ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮೊಹೋಲ್ (40) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 1.15ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗುಂಡು ತಿಂದ ಮೊಹೋಲ್, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದರೋಡೆಕೋರ ಶರದ್ ಮೃತಪಟ್ಟಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದರು. ವಿವಾಹ ವಾರ್ಷಿಕೋತ್ಸವ ದಿನದಂದೇ ಆಗಂತುಕ ವ್ಯಕ್ತಿ, ಮೊಹೋಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ, ಗುಂಡು ಹಾರಿಸಿದವರು ಯಾರು? ಕಾರಣ ಏನಿರಬಹುದು ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಶರದ್ ಮೊಹೋಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಸಾಗಿಸಲಾಗಿದೆ. ದೇಹ ಹೊಕ್ಕ ಗುಂಡುಗಳನ್ನು ಹೊರತೆಗೆಯುವಲ್ಲಿ ವೈದ್ಯಕೀಯ ತಂಡ ಯಶಸ್ವಿಯಾಗಿತ್ತು. ಆದರೆ, ಆತ ಬದುಕುಳಿಯಲಿಲ್ಲ. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ವಿಚಾರಣೆ ಕೂಡ ನಡೆದಿದೆ. ಶೂಟರ್​ಗಾಗಿ ಶೋಧ ಕಾರ್ಯ ನಡೆದಿದ್ದು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ದರೋಡೆಕೋರ ಮೊಹೋಲ್ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಗಂಭೀರ ಕ್ರಿಮಿನಲ್ ಅಪರಾಧಗಳನ್ನು ಎದುರಿಸುತ್ತಿದ್ದನು. ಕಳೆದ ತಿಂಗಳಷ್ಟೇ ಕೊತ್ರುದ್ ಪೊಲೀಸ್ ಠಾಣೆಯಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿತ್ತು. ಮೊಹೋಲ್ ಒಂಬತ್ತು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ. ಜಾಮೀನನ ಮೇಲೆ ಹೊರಗಡೆ ಬಂದಿದ್ದರು. ಕೆಲವು ಪ್ರಕರಣಗಳಿಂದ ಖುಲಾಸೆಗೊಂಡಿದ್ದ ಮೊಹೋಲ್, ತಮ್ಮ ಸಂಸ್ಥೆಯ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ರಾಜಕೀಯಕ್ಕೂ ಕಾಲಿಟ್ಟಿದ್ದರು.

ಇದನ್ನೂ ಓದಿ:ಹಣಕಾಸಿನ ವಿಚಾರ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ 12 ಜನ ಆರೋಪಿಗಳ ಬಂಧನ

ABOUT THE AUTHOR

...view details