ಕರ್ನಾಟಕ

karnataka

ETV Bharat / bharat

ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮೇಲೆ ಶೂ ಎಸೆದ ಯುವಕನ ಬಂಧನ

SP Leader Swami Prasad Maurya: ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮೇಲೆ ಯುವಕನೊಬ್ಬ ಶೂ ಎಸೆದಿದ್ದಾರೆ ಎಂದು ಅರ್ಚಕ ರಾಜು ದಾಸ್ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನ್ನು ಬಂಧಿಸಿದ್ದಾರೆ.

Shoe Thrown at SP Leader Swami Prasad Maurya
ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮೇಲೆ ಶೂ ಎಸೆದ ಯುವಕನ ಬಂಧನ

By ETV Bharat Karnataka Team

Published : Aug 22, 2023, 7:08 AM IST

ಲಖನೌ (ಉತ್ತರ ಪ್ರದೇಶ):ರಾಜಧಾನಿ ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಸೋಮವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಸಮಾವೇಶಕ್ಕಾಗಿ ಆಗಮಿಸಿದ್ದ ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಯುವಕನೊಬ್ಬರ ಶೂ ಎಸೆದಿದ್ದ. ಶೂ ಎಸೆದ ಘಟನೆಯಿಂದ ಕೋಪಗೊಂಡ ಬೆಂಬಲಿಗರು ಓಡಿ ಬಂದು ಆ ಯುವಕನನ್ನು ಹಿಡಿದು ತೀವ್ರವಾಗಿ ಥಳಿಸಿದ್ದರು.

ಆದರೆ, ಸ್ಥಳದಲ್ಲಿದ್ದ ಪೊಲೀಸರು ಯುವಕನನ್ನು ಬಂಧಿಸಿದರು. ಕಲ್ಲು ಎಸೆದ ಯುವಕನ ಹೆಸರು ಆಕಾಶ್ ಸೈನಿ ಎಂದು ಗುರುತಿಸಲಾಗಿದೆ. ಈ ಘಟನೆಯ ನಂತರ, ಅಯೋಧ್ಯೆಯ ಅರ್ಚಕ ರಾಜು ದಾಸ್ ಅವರು ವಿಡಿಯೋ ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪುರೋಹಿತ ರಾಜುದಾಸ್, ''ಹಿಂದೂ ಧರ್ಮ ಮತ್ತು ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಖಿಲೇಶ್ ಯಾದವ್ ಮೇಲೆ ಶೂ ಎಸೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಸೋಮವಾರ ಎಸ್ಪಿ ಕಾರ್ಯಕ್ರಮದಲ್ಲಿ ಹಿಂದುಳಿದ ಸಮಾಜಕ್ಕೆ ಸಂಬಂಧಿಸಿದ ಮಹಾಪುರುಷರ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಬಿಜ್ನೋರ್ ನೂರ್‌ಪುರದ ಶಾಸಕ ರಾಮ್ ಅವತಾರ್ ಸೈನಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ, ಅಖಿಲೇಶ್ ಬರುವ ಮುನ್ನವೇ ಯುವಕನೊಬ್ಬ ಸ್ವಾಮಿ ಪ್ರಸಾದ್ ಕಡೆಗೆ ಶೂ ಎಸೆದು ಹಲ್ಲೆ ನಡೆಸಿದ್ದು, ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಪೊಲೀಸರು ತಡಮಾಡದೇ ಯುವಕನನ್ನು ಬಂಧಿಸಿದ್ದಾರೆ. ಎಸ್ಪಿ ಕಾರ್ಯಕರ್ತರಿಂದ ಥಳಿತಕ್ಕೆ ಒಳಗಾದ ಯುವಕನನ್ನು ರಕ್ಷಿಸಿದ ನಂತರ ವಿಭೂತಿಖಂಡ್ ಪೊಲೀಸ್ ಠಾಣೆಗೆ ಕರೆದೊಯ್ದರು.

ಸ್ವಾಮಿ ಪ್ರಸಾದ್ ಮೌರ್ಯ ಕೆಲವು ಸಮಯದಿಂದ ಹಿಂದೂ ಧರ್ಮದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ರಾಮಚರಿತ ಮಾನಸ ಶ್ಲೋಕಗಳ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಸಾಮಾಜಿಕ ಜಾಲತಾನಗಳಲ್ಲಿ ಹಲವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಸರದಿ ಅಖಿಲೇಶ್ ಯಾದವ್ ಅವರದ್ದಾಗಿದೆ-ಅರ್ಚಕ ರಾಜು ದಾಸ್:ಲಖನೌದ ಕಾರ್ಯಕ್ರಮವೊಂದರಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಶೂ ಎಸೆದ ನಂತರ, ಅಯೋಧ್ಯೆಯ ಪ್ರಸಿದ್ಧ ಸಿದ್ಧ ಪೀಠ ಹನುಮಾನ್‌ಗರ್ಹಿಯ ಪ್ರಧಾನ ಅರ್ಚಕ ರಾಜು ದಾಸ್ ಅವರು, ''ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಶೂ ಹಿಡಿದು ಸ್ವಾಗತಿಸಿದ ಯುವಕ'' ಎಂದು ಹೇಳಿಕೆ ನೀಡಿದ್ದಾರೆ. ''ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಘಟನೆ ಎಚ್ಚರಿಕೆಯಷ್ಟೇ ಎಂದು ಅರ್ಚಕ ರಾಜುದಾಸ್ ಹೇಳಿದ್ದಾರೆ. ಮುಂದಿನ ಸರದಿ ಅಖಿಲೇಶ್ ಯಾದವ್ ಅವರದ್ದಾಗಿದೆ. ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೆ ನಡೆಸಿಕೊಳ್ಳಲಾಗುವುದು ಎಂದು ಅರ್ಚಕ ರಾಜುದಾಸ್ ಹೇಳಿದರು.

ಅರ್ಚಕ ರಾಜು ದಾಸ್ ವಿಡಿಯೋದಲ್ಲಿ ಅಸಮಾಧಾನ:ಸ್ವಾಮಿ ಪ್ರಸಾದ್ ಮೌರ್ಯ ಅವರು ಸನಾತನ ಧರ್ಮ ಮತ್ತು ಶ್ರೀ ರಾಮಚರಿತ ಮಾನಸ ಶ್ಲೋಕಗಳ ಮೇಲೆ ನಿಂದನೀಯ ಭಾಷೆಯನ್ನು ಬಳಸಿದ ರೀತಿಯನ್ನು ಅರ್ಚಕ ರಾಜು ದಾಸ್ ವಿಡಿಯೋದಲ್ಲಿ ಖಂಡಿಸಿದ್ದಾರೆ. ಡಾ.ರಾಮ್ ಮನೋಹರ ಲೋಹಿಯಾ ಅವರು ಅಯೋಧ್ಯೆಯಲ್ಲಿ ರಾಮಾಯಣ ಜಾತ್ರೆಗೆ ಚಾಲನೆ ನೀಡಿದರು. ಇದರ ಹೊರತಾಗಿಯೂ ಇಂದಿನ ಎಸ್ಪಿ ನಾಯಕರು ಹಿಂದೂ ಧರ್ಮ ಮತ್ತು ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ತಮ್ಮನ್ನು ತಾವು ಶ್ರೇಷ್ಠರು ಎಂದು ಪರಿಗಣಿಸುತ್ತಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಮಾತ್ರ ಶೂ ಎಸೆಯಲಾಗಿದೆ ಎಂದು ಅರ್ಚಕ ರಾಜು ದಾಸ್ ಹೇಳಿದ್ದಾರೆ. ಈ ನಾಯಕರು ಸನಾತನ ಧರ್ಮದ ದುರ್ಬಳಕೆಯನ್ನು ನಿಲ್ಲಿಸದಿದ್ದರೆ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಅವರು ವಿಡಿಯೋದಲ್ಲಿ ಎಚ್ಚರಿಕೆ ಕೂಡಾ ರವಾನಿಸಿದ್ದಾರೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ಪತ್ತೆ.. ನಿಷ್ಕ್ರಿಯಗೊಳಿಸಿದ ಭದ್ರತಾ ಸಿಬ್ಬಂದಿ

ABOUT THE AUTHOR

...view details