ಕನ್ಯಾಕುಮಾರಿ (ತಮಿಳುನಾಡು): ಓವರ್ ಟೇಕ್ ಮಾಡುವ ಭರದಲ್ಲಿ ಎಸ್ಯುವಿ ಕಾರೊಂದು ಫ್ಲೈಓವರ್ ಮೇಲೆ ಪಲ್ಟಿಯಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಮಾರ್ಥಂಡಮ್ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
Watch: ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ.. ಎದೆ ಝಲ್ಲೆನ್ನಿಸುವ ದೃಶ್ಯ ಸೆರೆ - ಫ್ಲೈ ಓವರ್ ಮೇಲೆ ಪಲ್ಟಿ
ಮುಂದೆ ಬರುತ್ತಿದ್ದ ಕಾರನ್ನು ಗಮನಿಸದೆ ಓವರ್ ಟೇಕ್ ಮಾಡಲು ಹೋಗಿದ್ದು, ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ತುಂಬ ಚಲಿಸಿ ಕೊನೆಗೆ ಪಲ್ಟಿಯಾಗಿದೆ. ಎದೆ ಝಲ್ಲೆನ್ನಿಸುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಓವರ್ ಟೇಕ್ ಮಾಡುವಾಗ ಕಾರು ಪಲ್ಟಿ
ಮುಂದೆ ಬರುತ್ತಿದ್ದ ಕಾರನ್ನು ಗಮನಿಸದೆ ಓವರ್ ಟೇಕ್ ಮಾಡಲು ಹೋಗಿದ್ದು, ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ತುಂಬ ಚಲಿಸಿ ಕೊನೆಗೆ ಪಲ್ಟಿಯಾಗಿದೆ. ಈ ಅಪಘಾತವು ಹಿಂದೆ ಬರುತ್ತಿದ್ದ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಓದಿ: ನಮ್ಮೂರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಿ: ಪಿಎಂಗೆ ಪತ್ರ ಬರೆದ 13ರ ಪೋರ!