ತಿರುಪೂರ್ (ತಮಿಳುನಾಡು):37 ವರ್ಷದ ವ್ಯಕ್ತಿಯೋರ್ವ ತಂದೆಗೆ ದೂರವಾಣಿ ಕರೆ ಮಾಡಿ, ತದನಂತರ ಫೇಸ್ಬುಕ್ ಲೈವ್ ಮೂಲಕವೇ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ತಮಿಳುನಾಡಿನ ತಿರುಪೂರ್ದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ರಾಮಕುಮಾರ್. ಖಾಸಗಿ ಕಂಪನಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ ಪತ್ನಿ ಸುಕನ್ಯಾ (34) ಹಾಗೂ 13 ವರ್ಷದ ಮಗ ಇದ್ದಾರೆ. ಅದೇನಾಯ್ತೋ ಗೊತ್ತಿಲ್ಲ!, ನಿನ್ನೆ ತಂದೆಗೆ ಫೋನ್ ಮಾಡಿರುವ ಈತ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರದ ವಿಡಿಯೋ ಫೇಸ್ಬುಕ್ನಲ್ಲಿ ಲೈವ್ ಪ್ರಸಾರ ಮಾಡುವುದಾಗಿಯೂ ಹೇಳಿದ್ದರಂತೆ.