ಕಣ್ಣೂರು(ಕೇರಳ):ಕೇರಳ ರಾಜ್ಯದಲ್ಲಿ ಸಂಭವಿಸಿರುವ ಅಪಘಾತವೊಂದು ನೋಡುಗರ ಎದೆ ಝಲ್ ಎನಿಸುವಂತಿದೆ. ಈ ಅಪಘಾತದಲ್ಲಿ ಸಿಲುಕಿದ ಎಂಟು ವರ್ಷದ ಬಾಲಕ ಪವಾಡ ಸದೃಶ್ಯ ರೀತಿಯಲ್ಲಿ ಬಚಾವ್ ಆಗಿದ್ದಾನೆ. ಅಡ್ಡರಸ್ತೆಯಿಂದ ಸೈಕಲ್ ತುಳಿದುಕೊಂಡು ಬರುತ್ತಿದ್ದ ಬಾಲಕ ರಸ್ತೆ ಮೇಲೆ ವೇಗವಾಗಿ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದು ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ದಿಢೀರ್ ಆಗಿ ಬಸ್ಸೊಂದು ಆಗಮಿಸಿದೆ. ಆಗ ಬಾಲಕನು ತೂರಿಕೊಂಡು ರಸ್ತೆಯ ಮತ್ತೊಂದು ಬದಿಗೆ ಬಿದ್ದರೆ, ಸೈಕಲ್ ಮೇಲೆ ಬಸ್ ಹರಿದಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಪಘಾತದಲ್ಲಿ ನ್ಯಾರೋ ಎಸ್ಕೇಪ್ ಆದ ಬಾಲಕ ಓದಿ:ದಿನವೂ ಏರುತ್ತಿರುವ ಬೆಲೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಹೌದು, 8 ವರ್ಷದ ಶಾಧುರಹ್ಮಾನ್ ತನ್ನ ಮನೆಯ ಕಾಂಪೌಂಡ್‌ನಲ್ಲಿ ಹೊಸ ಸೈಕಲ್‌ನಲ್ಲಿ ಆಟವಾಡುತ್ತಿದ್ದ. ಅಡ್ಡರಸ್ತೆ ಮೂಲಕ ಸೈಕಲ್ ತುಳಿದುಕೊಂಡು ತಳಿಪರಂಬ-ಇರಿಟ್ಟಿ ರಾಜ್ಯ ಹೆದ್ದಾರಿಗೆ ಬಂದಿದ್ದಾನೆ. ಇಳಿಜಾರು ಇರುವುದರಿಂದ ಸೈಕಲ್ ವೇಗವಾಗಿಯೇ ಮುಖ್ಯರಸ್ತೆಗೆ ಬಂದಿದೆ. ಇದೇ ವೇಳೆ ಮುಖ್ಯರಸ್ತೆಯಲ್ಲಿ ವೇಗವಾಗಿ ಬೈಕ್ವೊಂದು ಸಾಗುತ್ತಿತ್ತು. ತನ್ನ ಸೈಕಲ್ ವೇಗವನ್ನು ನಿಯಂತ್ರಿಸಲ ಸಾಧ್ಯವಾಗದ ಹಿನ್ನೆಲೆ ಬಾಲಕ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬಾಲಕ ರಸ್ತೆಯ ಇನ್ನೊಂದು ಬದಿಗೆ ತೂರಿಕೊಂಡು ಬಿದ್ದಿದ್ದಾನೆ. ಇದೇ ಸಮಯದಲ್ಲಿ ಬೈಕ್ ಹಿಂಬದಿಯಲ್ಲೇ ವೇಗವಾಗಿ ಬಂದ ಬಸ್ ಹೊಸ ಸೈಕಲ್ ಮೇಲೆ ಹರಿದಿದೆ.
ಓದಿ:ಬಿಜೆಪಿಗೆ ಸೇರ್ಪಡೆಯಾದ ಮೂವರು 'ವಿಐಪಿ' ಶಾಸಕರು..
ಬಾಲಕ ರಸ್ತೆಯ ಇನ್ನೊಂದು ಬದಿಗೆ ಬಿದ್ದ ಪರಿಣಾಮ ಈ ಅಪಘಾತದಿಂದ ಪಾರಾಗಿದ್ದಾನೆ. ಇಲ್ಲವಾದಲ್ಲಿ ದುರಂತವೇ ನಡೆದು ಹೋಗುತ್ತಿತ್ತು. ಈ ಘಟನೆಯಲ್ಲಿ ಬೈಕ್ ಸವಾರನಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ. ಈ ಕುರಿತಂತೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ.