ಕರ್ನಾಟಕ

karnataka

ETV Bharat / bharat

ಸಿಧು ನೇತೃತ್ವದಲ್ಲಿ ಪಂಜಾಬ್​​ನ ಮುಂದಿನ ಚುನಾವಣೆ..ರಾವತ್​ ಹೇಳಿಕೆಗೆ ಕೈ ನಾಯಕರ ತೀವ್ರ ಆಕ್ಷೇಪ - ಸುನಿಲ್ ಜಖರ್

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದಾಗಿ ರಾವತ್​​ ಕೊಟ್ಟಿರುವ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ.

sunil jakhar
sunil jakhar

By

Published : Sep 20, 2021, 12:19 PM IST

ನವದೆಹಲಿ(ಚಂಡೀಗಢ): ಪಂಜಾಬ್​​ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಹಾಗೆ ಕಾಣ್ತಿಲ್ಲ. ಪಕ್ಷದ ಆಂತರಿಕ ಸಮಸ್ಯೆಗಳಿಂದಾಗಿ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್​ ಅಮರಿಂದರ್​ ಸಿಂಗ್ ರಾಜೀನಾಮೆ ನೀಡಿದ್ದರು. ಇಂದು ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಚರಣ್​ಜಿತ್​​​ ಸಿಂಗ್​ ಚನ್ನಿ ಅಧಿಕಾರ ಸ್ವೀಕರಿಸಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಪಂಜಾಬ್​​ನ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್​ ನೀಡಿರುವ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದೆ. ಪಂಜಾಬ್​ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿಯಿದೆ. ಇಂಥ ಸಮಯದಲ್ಲಿ ಸಿಎಂ ಬದಲಾಯಿಸಿರುವ ಕಾಂಗ್ರೆಸ್​​, ನವಜೋತ್​ ಸಿಂಗ್ ಸಿಧು ನೇತೃತ್ವದಲ್ಲಿ ಚುನಾವಣೆಗೆ ಹೋಗುವುದಾಗಿ ಹೇಳಿದೆ.

ರಾಜ್ಯದ ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ಹೋಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ, ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ, ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಅವರು ರಾಜ್ಯದ ಜನಪ್ರಿಯ ನಾಯಕರು ಎಂದು ಹರೀಶ್ ರಾವತ್​ ಹೇಳಿಕೆ ಕೊಟ್ಟಿದ್ದರು.

ಹರೀಶ್ ರಾವತ್ ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಸುನಿಲ್ ಜಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಣ್​​ಜಿತ್​ ಸಿಂಗ್​ ಸಿಎಂ ಆಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಸಮಯದಲ್ಲಿ ರಾವತ್ ನೀಡಿರುವ ಈ ಹೇಳಿಕೆ ಆಘಾತಕಾರಿ ಎಂದಿದ್ದಾರೆ. ಅಲ್ಲದೇ, ಸಿಧು ನೇತೃತ್ವದಲ್ಲಿ ಚುನಾವಣೆಗೆ ಹೋಗುವುದರಿಂದ ಇಲ್ಲಿ, ಮುಖ್ಯಮಂತ್ರಿಯವರ ಪ್ರಾಬಲ್ಯ ಕುಸಿಯುತ್ತದೆ. ಜತೆಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಬೆನ್ನಲ್ಲೇ ಬಿಜೆಪಿ ಐಟಿ ಸೆಲ್​ನ ರಾಷ್ಟ್ರೀಯ ಉಸ್ತುವಾರಿ ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದು, ನವಜೋತ್​ ಸಿಂಗ್​ ಸಿಧುಗೆ ಸ್ಥಾನಮಾನ ನೀಡಿ, ಚರಣ್​ಜಿತ್​ ಸಿಂಗ್ ಅವ​ರನ್ನು ನಾಮಕೇವಾಸ್ಥೆ ಸಿಎಂ ಮಾಡಿದರೆ ಇದು ದಲಿತ ಸಮುದಾಯಕ್ಕೆ ದೊಡ್ಡ ಅವಮಾನ ಎಂದಿದ್ದಾರೆ.

ABOUT THE AUTHOR

...view details