ಬಲಂಗೀರ್ (ಒಡಿಶಾ): ಕೆಲವು ಹಬ್ಬಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಒಡಿಶಾ ರಾಜ್ಯದಲ್ಲಿ ವಾಡಿಕೆಯಾಗಿದೆ. ಆದರೆ, ಈ ಆಚರಣೆ ಮಕ್ಕಳ ಮನಸ್ಸಿನ ಮೇಲೆ ಋಣಾತ್ಮಕ ಪ್ರಭಾವ ಬೀರಿದೆ ಎಂಬುದಕ್ಕೆ ಇಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ.
ಒಡಿಶಾದ ಬಲಂಗೀರ್ ಜಿಲ್ಲೆಯ ಪಂಡರಪಿಟ ಎಂಬ ಗ್ರಾಮದಲ್ಲಿ ಐವರು ಮಕ್ಕಳು ಸೇರಿಕೊಂಡು ಯಾವುದೋ ದೇವರ ಹೆಸರಿನಲ್ಲಿ ನಾಯಿಮರಿಯನ್ನು ಕೊಂದು ಬಲಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸತ್ತ ನಾಯಿಮರಿಯ ಮೆರವಣಿಗೆ ನಡೆಸಿ ಅದರ ರಕ್ತ ಕುಡಿದಿದ್ದಾರೆ.