ಹೈದರಾಬಾದ್:ಇಲ್ಲಿನ ಹಯಾತ್‌ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪ್ರಾಪ್ತೆಯ ಅತ್ಯಾಚಾರ ಕೇಸ್ ತನಿಖೆಯಲ್ಲಿ ಹಲವು ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಅಪ್ರಾಪ್ತ ಆರೋಪಿಗಳು ಅಶ್ಲೀಲ ವಿಡಿಯೋಗಳಿಗೆ ಮಾರುಹೋಗಿ ಅದನ್ನೇ ಪ್ರಯೋಗಿಸುವ ಸಲುವಾಗಿ ಬಾಲಕಿಯನ್ನು ರೇಪ್ ಮಾಡಿರುವುದು ಗೊತ್ತಾಗಿದೆ.
ರೇಪ್ಗಾಗಿ ನಡೆದಿತ್ತು ಪೂರ್ವ ಯೋಜನೆ:ಬಾಲಕಿಯನ್ನು ರೇಪ್ ಮಾಡುವ ಯೋಜನೆಯ ಹಿಂದೆ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಮುಖ ಆರೋಪಿಯ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಗೀಳು ಕಾರಣವಾಗಿತ್ತು. ತನ್ನಿಬ್ಬರು ಸಹಪಾಠಿಗಳಿಗೂ ಇದರ ಹುಚ್ಚು ಅಂಟಿಸಿದ್ದ ಆತ, ತನ್ನ ಮೊಬೈಲ್ನಲ್ಲಿ ದಿನವೂ ನೀಲಿಚಿತ್ರಗಳನ್ನು ವೀಕ್ಷಿಸುತ್ತಿದ್ದ. ಬಳಿಕ ಅದನ್ನು ತನ್ನ ಗೆಳೆಯರಿಗೂ ತೋರಿಸುತ್ತಿದ್ದ.
ಪ್ರತಿದಿನ ಶಾಲೆ ಬಿಟ್ಟ ನಂತರ ನಿರ್ಜನ ಪ್ರದೇಶಗಳಿಗೆ ಹೋಗುತ್ತಿದ್ದ ಆರೋಪಿಗಳು, ಆ ರೀತಿಯ ವಿಡಿಯೋಗಳನ್ನು ನೋಡುತ್ತಿದ್ದರು. ಇದು ಹಲವು ತಿಂಗಳುಗಳ ಕಾಲ ನಡೆದಿದೆ. ಬಳಿಕ ಇದರಿಂದ ಪ್ರೇರೇಪಿತರಾಗಿ ವಿಡಿಯೋದಲ್ಲಿರುವಂತೆಯೇ ಪ್ರಯೋಗಿಸಬೇಕು ಎಂದು ನಿರ್ಧರಿಸಿ, ತನ್ನದೇ ಶಾಲೆಯ ಸಹಪಾಠಿ ಬಾಲಕಿಯನ್ನು ಆಯ್ದುಕೊಂಡಿದ್ದಾರೆ.