ಕರ್ನಾಟಕ

karnataka

ETV Bharat / bharat

ಅಯ್ಯೋ ದೇವರೆ... ಕೋವಿಡ್ ರೋಗಿಗಳಿಗೆ ಮರದ ಕೆಳಗೆ ಚಿಕಿತ್ಸೆ, ಇಂದೆಂಥಾ ಸ್ಥಿತಿ ನೋಡಿ! - ಮರದ ಕೆಳಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ

ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧ ತೊಂದರೆ ಉಂಟಾಗಿದ್ದು, ಇದರ ಮಧ್ಯೆ ಮರದ ಕೆಳಗೆ ಚಿಕಿತ್ಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

COVID patients
COVID patients

By

Published : May 5, 2021, 11:02 PM IST

ಆಗ್ರಾ ಮಾಲ್ವಾ(ಮಧ್ಯಪ್ರದೇಶ): ಎರಡನೇ ಹಂತದ ಕೋವಿಡ್ ಅಲೆಯಿಂದ ದೇಶ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣ, ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ.

ಕೆಲವೊಂದು ದೇಶಗಳಲ್ಲಿ ದಾಖಲೆ ಮಟ್ಟದಲ್ಲಿ ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆ ಮುಂಭಾಗ ಹಾಗೂ ರೋಡ್​ನಲ್ಲೇ ಅವರಿಗೆ ಚಿಕಿತ್ಸೆ ನೀಡುವಂತಹ ಘಟನೆ ನಡೆಯುತ್ತಿವೆ.

ಕೋವಿಡ್ ರೋಗಿಗಳಿಗೆ ಮರದ ಕೆಳಗೆ ಚಿಕಿತ್ಸೆ

ಇದೀಗ ಮಧ್ಯಪ್ರದೇಶದ ಆಗ್ರಾಮಾಲ್ವಾದಲ್ಲಿ ಕೋವಿಡ್ ರೋಗಿಗಳಿಗೆ ಮರದ ಕೆಳಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ವಿಡಿಯೋ ವೈರಲ್​ ಆಗಿದೆ. ಕೆಲ ರೋಗಿಗಳು ಮರದ ಕೆಳಗೆ ಮಲಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪ್ರತಿ 20 ನಿಮಿಷಕ್ಕೆ ಒಬ್ಬ ಪೊಲೀಸ್​ಗೆ ಕೊರೊನಾ ಸೋಂಕು

ವೈದ್ಯಕೀಯ ಅಧಿಕಾರಿ ಡಾ. ಮನೀಶ್ ಕುರೀಲ್​ ಇದರ ಬಗ್ಗೆ ಮಾತನಾಡಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದ ಕಾರಣ ಈ ರೀತಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ABOUT THE AUTHOR

...view details