ತಿರುಚ್ಚಿ(ತಮಿಳುನಾಡು):ಇಲ್ಲಿನ ಭೀಮ್ನಗರದ ವಕೀಲ ಗೋಪಿ ಕಣ್ಣನ್ ಅವರನ್ನ ಭಾನುವಾರ ಬೆಳಗ್ಗೆ ಅಪರಿಚಿತರ ಗುಂಪೊಂದು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ತಿರುಚ್ಚಿಯ ವಕೀಲನಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಿ ಕಣ್ಣನ್ ಮೇಲೆ ಈ ದಾಳಿ ನಡೆದಿದೆ. ಮನೆಯ ಮುಂದೆ ಮಗಳೊಂದಿಗೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಹಲ್ಲೆ ನಡೆಸಿರುವ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.