ಕರ್ನಾಟಕ

karnataka

ETV Bharat / bharat

ಬಸ್​​ನಿಂದ ಕಂಡಕ್ಟರ್ ಬಿದ್ರೂ 5 ಕಿಲೋಮೀಟರ್ ಹೋಗೋವರೆಗೂ ಡ್ರೈವರ್​ಗೆ ಗೊತ್ತೇ ಆಗಿಲ್ಲ!! - kanyakumari latest news

ಚಲಿಸುತ್ತಿರುವ ಬಸ್​​ನಿಂದ ಕಂಡಕ್ಟರ್ ಮಹಾಲಿಂಗಂ ಉರುಳಿ ಬಿದ್ದಿದ್ದು, ಇದನ್ನು ಗಮನಿಸದ ಚಾಲಕ ಸುಮಾರು ಐದು ಕಿಲೋಮೀಟರ್​ವರೆಗೆ ಬಸ್​ ಅನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

Bus ran without conductor
ಕಂಡಕ್ಟರ್​ಗೆ ಗಾಯ

By

Published : Dec 14, 2020, 9:58 PM IST

ಕನ್ಯಾಕುಮಾರಿ (ತಮಿಳುನಾಡು):ಬಸ್​ನಿಂದ ಕಂಡಕ್ಟರ್ ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, ಇದನ್ನು ಚಾಲಕ ಗಮನಿಸದೇ ಬಸ್ ಅನ್ನು ಸುಮಾರು 5 ಕಿಲೋಮೀಟರ್ ತೆಗೆದುಕೊಂಡು ಹೋದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.

ವಡಕಂಕುಲಂ ಮತ್ತು ನಾಗರಕೋಯಿಲ್ ಮಾರ್ಗದಲ್ಲಿ ಘಟನೆ ಸಂಭವಿಸಿದ್ದು, ಚಲಿಸುತ್ತಿರುವ ಬಸ್​​ನಿಂದ ಕಂಡಕ್ಟರ್ ಮಹಾಲಿಂಗಂ ಉರುಳಿ ಬಿದ್ದಿದ್ದನು. ಸುಮಾರು ಐದು ಕಿಲೋಮೀಟರ್​ಗಳ ನಂತರ ಕಂಡಕ್ಟರ್ ಇಲ್ಲದಿರುವುದನ್ನು ಕಂಡ ಸಾರ್ವಜನಿಕರು ಚಾಲಕನನ್ನು ವಿಚಾರಿಸಿದಾಗ ಅನಾಹುತ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಭಕ್ತನ ಪಂಚೆಯಲ್ಲಿ ಅಡಗಿತ್ತು ಪುರಾತನ ಪಂಚಲೋಹ ವಿಗ್ರಹ !

ಬಸ್​ ಅನ್ನು ವಾಪಸ್ ತೆಗೆದುಕೊಂಡು ಹೋದ ಚಾಲಕ ರಸ್ತೆಯ ಪಕ್ಕದಲ್ಲಿ ಗಾಯಗಳಾಗಿ ಬಿದ್ದಿದ್ದ ಮಹಾಲಿಂಗಂನನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details