ಚೆನ್ನೈ(ತಮಿಳುನಾಡು): ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಯುವಕನೊಬ್ಬ ಟ್ರಕ್ನ ಹಿಂಬದಿ ಚಕ್ರದಲ್ಲಿ ಮಲಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಚೆನ್ನೈನಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಚೆನ್ನೈ ಪೋರ್ಟ್ನಿಂದ ತಿರುವಟ್ಟೂರ್ ಕಡೆ ತೆರಳುತ್ತಿದ್ದ ಟ್ರಕ್ ಹಿಂದಿನ ಚಕ್ರದಲ್ಲಿ ಮಗಲಿದ್ದಾನೆ. ಆತನ ಮೇಲೆ ಚಕ್ರ ಹರಿದಿರುವ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಪೋಸ್ಟ್ ಮಾರ್ಟಂಗೆ ರವಾನಿಸಿದ್ದಾರೆ.