ಕರ್ನಾಟಕ

karnataka

ETV Bharat / bharat

ಅಸಹಾಯಕ ಮಹಿಳೆಯಿಂದ ಬಾಡಿ ಮಸಾಜ್: ಪೊಲೀಸ್ ಅಧಿಕಾರಿ ಅಮಾನತು.. - ಸಹಾಯಕ ಮಹಿಳೆಯ ದುರುಪಯೋಗ ಪಡಿಸಿಕೊಂಡ ಪೊಲೀಸ್ ಅಧಿಕಾರಿ

ಮಹಿಳೆಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿರುವ ಬಿಹಾರದ ದರ್ಹಾರ್‌ನ ಪೊಲೀಸ್ ಅಧಿಕಾರಿ ಮೇಲೆ ಕೇಳಿ ಬಂದಿದ್ದು, ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

SHO caught unawares while indulging in pleasure-seeking act in Bihar's Darhar
ಪೊಲೀಸ್ ಅಧಿಕಾರಿಗೆ ಮಹಿಳೆಯಿಂದ ಬಾಡಿ ಮಸಾಜ್: ಅಸಹಾಯಕತೆಯ ದುರುಪಯೋಗ?

By

Published : Apr 29, 2022, 1:49 PM IST

ಸಹರ್ಸಾ(ಬಿಹಾರ):ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರೊಬ್ಬರಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟೇ ಈ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಕೇಳಿಬರುವ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಮಹಿಳೆಯ ಅಸಹಾಯಕತೆಯನ್ನು ಅಧಿಕಾರಿ ದುರುಪಯೋಗ ಪಡಿಸಿಕೊಂಡಿರಬಹುದು ಎನ್ನಲಾಗಿದೆ.

ಬಿಹಾರದ ದರ್ಹಾರ್‌ನ ಔಟ್‌ಪೋಸ್ಟ್‌ನಲ್ಲಿ ಎಸ್​ಹೆಚ್​ಒ (ಸ್ಟೇಷನ್ ಹೌಸ್ ಆಫೀಸರ್) ಆಗಿರುವ ಶಶಿಭೂಷಣ ಸಿನ್ಹಾ ವಿಡಿಯೋದಲ್ಲಿ ಸೆರೆಯಾಗಿದ್ದು, ಮಹಿಳೆಯೊಬ್ಬರು ಕೊಠಡಿಯೊಂದರಲ್ಲಿ ಅವರಿಗೆ ಬಾಡಿ ಮಸಾಜ್ ಮಾಡುತ್ತಿದ್ದಾರೆ. ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಶಶಿಭೂಷಣ ಸಿನ್ಹಾ ವಕೀಲರೊಂದಿಗೆ ಮಾತನಾಡುತ್ತಿರುವುದು ಗೊತ್ತಾಗಿದೆ. ಇದರ ಜೊತೆಗೆ ಜೈಲಿನಲ್ಲಿರುವ ತನ್ನ ಮಗನ ಬಿಡುಗಡೆಗೆ ಸಹಾಯ ಮಾಡುವಂತೆ ಆ ಮಹಿಳೆ ಕೇಳಿಕೊಳ್ಳುತ್ತಿದ್ದಾಳೆ.

ಮಹಿಳೆ ಬಡವಳಾಗಿದ್ದು, ಕೆಲವು ಪ್ರಕರಣಗಳಲ್ಲಿ ಆಕೆಯ ಮಗ ಜೈಲು ಸೇರಿದ್ದಾನೆ. ಆತನ ಬಿಡುಗಡೆ ಸಹಾಯದ ಅಗತ್ಯವಿದೆ. ಆಧಾರ್ ಕಾರ್ಡ್‌, ಫೋನ್ ನಂಬರ್ ಮತ್ತು ಮಹಿಳೆಯ ವಿಳಾಸ ಸೇರಿದಂತೆ ಮಹಿಳೆಯನ್ನು ನಿಮ್ಮ ಸ್ಥಳಕ್ಕೆ ಕಳುಹಿಸುತ್ತೇನೆ. ನಾನು ಆಕೆಗಾಗಿ 10 ಸಾವಿರ ರೂಪಾಯಿ ಖರ್ಚು ಮಾಡಿದ್ದೇನೆ. ನಿಮಗೆಷ್ಟು ಬೇಕೋ ಅಷ್ಟು ಹಣವನ್ನು ನಾನು ನಿಮಗೆ ಕಳುಹಿಸುತ್ತೇನೆ ಎಂದು ಶಶಿಭೂಷಣ ಸಿನ್ಹಾ ವಕೀಲರೊಂದಿಗೆ ಮಾತನಾಡಿದ್ದಾರೆ. ಕೊಠಡಿಯಲ್ಲಿ ಮೂವರಿದ್ದು, ಮತ್ತೊಬ್ಬ ಮಹಿಳೆ ಕುರ್ಚಿಯ ಮೇಲೆ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಎರಡು ತಿಂಗಳ ಹಿಂದಿನದು ಎಂದು ಹೇಳಲಾಗುತ್ತಿದೆ. ವಿಡಿಯೋ ಹೊರಬಿದ್ದ ನಂತರ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ತಕ್ಷಣ ಕ್ರಮ ಕೈಗೊಂಡು ಪೊಲೀಸ್ ಅಧಿಕಾರಿ ಶಶಿಭೂಷಣ್ ಸಿನ್ಹಾ ಅವರನ್ನು ಅಮಾನತುಗೊಳಿಸಿದ್ದಾರೆ.

ಇದನ್ನೂ ಓದಿ:ತಬ್ಬಲಿ - ಮಾನಸಿಕ ಅಸ್ವಸ್ಥ ಯುವತಿ ಮೇಲೆ ದೊಡ್ಡಪ್ಪ, ಪೊಲೀಸ್​ ಪೇದೆಯಿಂದ ರೇಪ್​: ಈಗ ತುಂಬು ಗರ್ಭಿಣಿ!

For All Latest Updates

TAGGED:

ABOUT THE AUTHOR

...view details