ಪುಣೆ:ಸೋಮವಾರ ಬೆಳಗ್ಗೆ (ಇಂದು) ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ (Shivshahir Babasaheb Purandare) ಅವರು ಇಲ್ಲಿನ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ (Dinanath Mangeshkar Hospital) ನಿಧನರಾಗಿದ್ದಾರೆ.
ಇತಿಹಾಸಕಾರ ಶಿವಶಾಹಿರ್ ಬಾಬಾ ಸಾಹೇಬ್ ಪುರಂದರೆ ನಿಧನ - ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ ನಿಧನ,
ಮಹಾರಾಷ್ಟ್ರದ ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ (Dinanath Mangeshkar Hospital) ಸೋಮವಾರ ಬೆಳಗ್ಗೆ (ಇಂದು) ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ (Shivshahir Babasaheb Purandare) ಅವರು ಕೊನೆಯುಸಿರೆಳೆದಿದ್ದಾರೆ (Passed away).
ಕೆಲ ದಿನಗಳಿಂದ ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಬಾಬಾಸಾಹೇಬ್ ಪುರಂದರೆ (Shivshahir Babasaheb Purandare) ಅವರು ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯ (Dinanath Mangeshkar Hospital) ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಸಂಜೆ ಅವರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ತಿಳಿದು ಬಂದಿದೆ.
ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಇತಿಹಾಸವನ್ನು ಮಹಾರಾಷ್ಟ್ರ ಮತ್ತು ದೇಶಕ್ಕೆ ತಿಳಿಸುವ ಕೆಲಸವನ್ನು ಬಾಬಾಸಾಹೇಬ್ ಪುರಂದರೆ (Shivshahir Babasaheb Purandare) ಮಾಡಿದ್ದರು. ಮಹಾರಾಷ್ಟ್ರದ ಕೋಟ್ಯಂತರ ಜನರಿಗೆ ಛತ್ರಪತಿ ಶಿವಾಜಿ ಮಹಾರಾಜರನ್ನು ನಿಜವಾದ ಅರ್ಥದಲ್ಲಿ ಅರ್ಥಮಾಡಿಕೊಳ್ಳುವಂತೆ ಮಾಡಿದವರು ಬಾಬಾಸಾಹೇಬರು. ಇಂದು ಬೆಳಗ್ಗೆ ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ ನಿಧನವಾಗಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.