ರಾಯಗಡ:ಕರ್ನಾಟಕ ಸೇರಿದಂತೆ ದೇಶದಲ್ಲೇ ಭಾರಿ ಸದ್ದು ಮಾಡಿ ಸದ್ಯ ತಣ್ಣಗಾಗಿರುವ ಹಿಜಾಬ್ ಪ್ರಕರಣದ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದರು.
ಗೃಹಿಣಿಯಾಗಿರುವ ನಜ್ನೀನ್ ಕೆ. ಪಟೇಲ್ ಈಗ ರಾಜಕಾರಣಿಯಾಗಿ ಇಲ್ಲಿನ ಅಪ್ಟಾ ಗ್ರಾಮ ಪಂಚಾಯಿತಿಯ ಅಧಿಕಾರದ ಗದ್ದುಗೆ ಏರಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಶಿವಸೇನೆ ಮುಸ್ಲಿಂ ಮಹಿಳೆಗೆ ಅಧಿಕಾರ ವಹಿಸಿದೆ. ಅಲ್ಲದೇ, ಈ ಗ್ರಾಮದಲ್ಲಿ 6 ದಶಕಗಳಿಂದ ಆಡಳಿತ ನಡೆಸುತ್ತಿದ್ದ ರೈತ ಮತ್ತು ಕಾರ್ಮಿಕ ಪಕ್ಷ ಸೋಲನುಭವಿಸಿದೆ.