ಕರ್ನಾಟಕ

karnataka

ETV Bharat / bharat

ರಾಣಾ ದಂಪತಿ ತಂಗಿದ್ದ ಮನೆಗೆ ಶಿವಸೇನೆ ಕಾರ್ಯಕರ್ತರ ಮುತ್ತಿಗೆ - ರಾಣಾ ದಂಪತಿಗಳು ತಂಗಿದ್ದ ಮನೆಗೆ ಶಿವಸೇನೆ ಕಾರ್ಯಕರ್ತರ ಮುತ್ತಿಗೆ

ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರು ಇಂದು ಬೆಳಗ್ಗೆ 9 ಗಂಟೆಗೆ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಗೆ ಆಗಮಿಸಿ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಹೇಳಿದ್ದರು. ಆದರೆ, ಇಂದು ಬೆಳಗ್ಗೆ 9 ಗಂಟೆಗೆ ರಾಣಾ ದಂಪತಿ ಮಾತೋಶ್ರೀಯನ್ನು ತಲುಪದ ಕಾರಣ, ಶಿವಸೇನೆಯ ಕಾರ್ಯಕರ್ತರು ಅವರ ಕಟ್ಟಡವನ್ನು ಪ್ರವೇಶಿಸಿದ್ದರು..

shivsena-workers-reach-in-rana-couple-building
ರಾಣಾ ದಂಪತಿಗಳು ತಂಗಿದ್ದ ಮನೆಗೆ ಶಿವಸೇನೆ ಕಾರ್ಯಕರ್ತರ ಮುತ್ತಿಗೆ

By

Published : Apr 23, 2022, 11:40 AM IST

ಮುಂಬೈ : ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರು ಇಂದು ಬೆಳಗ್ಗೆ 9 ಗಂಟೆಗೆ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಗೆ ಆಗಮಿಸಿ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಹೇಳಿದ್ದರು. ಈ ಬಗ್ಗೆ ಪೊಲೀಸರು ನೋಟಿಸ್ ನೀಡಿದ್ದರೂ ಅದನ್ನು ಉಲ್ಲಂಘಿಸಿ ದಂಪತಿ ಮಾತೋಶ್ರಿಗೆ ಆಗಮಿಸಿ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಹೇಳಿದ್ದರು.

ಆದರೆ, ಇಂದು ಬೆಳಗ್ಗೆ 9 ಗಂಟೆಗೆ ರಾಣಾ ದಂಪತಿ ಮಾತೋಶ್ರೀಯನ್ನು ತಲುಪದ ಕಾರಣ, ಶಿವ ಸೇನೆಯ ಕಾರ್ಯಕರ್ತರು ಅವರ ಕಟ್ಟಡವನ್ನು ಪ್ರವೇಶಿಸಿದ್ದರು. ಜೊತೆಗೆ ದಂಪತಿಯನ್ನ ಹೊರ ಬರುವಂತೆ ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಶಿವಸೇನೆಯ ಕಾರ್ಯಕರ್ತರು ಜಮಾಯಿಸಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಓದಿ :ಸಿಐಎಸ್​ಎಫ್​ ವಾಹನದ ಮೇಲೆ ಭಯೋತ್ಪಾದಕರ ದಾಳಿ ಪ್ರಕರಣ: ಸಿಸಿಟಿವಿ ದೃಶ್ಯಾವಳಿ

For All Latest Updates

TAGGED:

ABOUT THE AUTHOR

...view details