ಮುಂಬೈ (ಮಹಾರಾಷ್ಟ್ರ): ಶಿವಸೇನಾ ನಾಯಕ ಏಕನಾಥ್ ಶಿಂಧೆ ಗುಂಪಿನಲ್ಲಿ 35ಕ್ಕೂ ಹೆಚ್ಚು ಶಾಸಕರಿದ್ದು, ರಾಜ್ಯದಲ್ಲಿ ಬಿಸಿ ಬಿಸಿ ವಾತಾವರಣ ನಿರ್ಮಾಣವಾಗಿದೆ. ಶಿವಸೇನೆ ಸಂಸದ ಸಂಜಯ್ ರಾವುತ್ ಬಂಡಾಯ ನಾಯಕರ ವಿರುದ್ಧ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದ್ದಾರೆ. ಬಂಡಾಯ ನಾಯಕರಾದ ದೀಪಕ್ ಕೇಸರ್ಕರ್ ಮತ್ತು ಗುಲಾಬ್ರಾವ್ ಪಾಟೀಲ್ರನ್ನು ಕಟುವಾಗಿ ಟೀಕಿಸಿ ರಾವುತ್ ಟ್ವೀಟ್ ಮಾಡಿದ್ದಾರೆ.
ಶಿವಸೇನೆ ನಾಯಕ ಸಂಜಯ್ ರಾವುತ್ ಟ್ವೀಟ್ನಲ್ಲಿ, ಅಪ್ಪನನ್ನು ಬದಲಾಯಿಸುವ ಭಾಷೆಯನ್ನು ಯಾರು ಬಳಸುತ್ತಿದ್ದಾರೆ ನೋಡಿ.. ಕೇಸರ್ಕರ್ ಸ್ವಲ್ಪ ತಾಳ್ಮೆಯಿಂದಿರಿ. ಪರ್ವತದ ಒಂದು ಹೊದಿಕೆಯನ್ನು ಕಳೆದುಕೊಳ್ಳಬೇಡಿ. ನಿನಗೆ ಅವರು ಗೊತ್ತಾ.. ಜೈ ಮಹಾರಾಷ್ಟ್ರ! ಎಂದು ಬರೆಯುವ ಮೂಲಕ ಕೇಸರ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ:ಮಹಾ ರಾಜಕೀಯ ಬಿಕ್ಕಟ್ಟು: ಸುಪ್ರೀಂನಲ್ಲಿ 16 ಅತೃಪ್ತ ಶಾಸಕರ ಅರ್ಜಿ ವಿಚಾರಣೆ
ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಚಿವ ಆದಿತ್ಯ ಠಾಕ್ರೆ ಮತ್ತು ಸಂಸದ ಸಂಜಯ್ ರಾವುತ್ ಅವರು ಬಂಡಾಯಗಾರರನ್ನು ಟೀಕಿಸುತ್ತಿದ್ದಾರೆ. ಅಲ್ಲದೇ, ಮಹಾರಾಷ್ಟ್ರಕ್ಕೆ ಬರುವಂತೆ ಮನವಿ ಮಾಡಲಾಗುತ್ತಿದೆ. ಇದೀಗ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಿಬ್ಬರು ಶಾಸಕರು ನಮ್ಮ ಗುಂಪಿಗೆ ಸೇರಿಕೊಂಡರು. ಅವರ ಬೆಂಬಲದಿಂದ ನಮ್ಮ ಬಲ 51ಕ್ಕೆ ಏರಿಕೆಯಾಗಲಿದೆ. ಮಹಾರಾಷ್ಟ್ರಕ್ಕೆ 3 ರಿಂದ 4 ದಿನಗಳಲ್ಲಿ ತೀರ್ಮಾನ ತೆಗೆದುಕೊಂಡು ಬರುತ್ತೇವೆ. ಶಿಂಧೆ ಗುಂಪಿನ ಶಾಸಕರು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ. ಏಕನಾಥ್ ಶಿಂಧೆ ಗುಂಪನ್ನು ಮೊದಲು ಪರಿಗಣಿಸಬೇಕು. ಮಹಾವಿಕಾಸ್ ಅಘಾಡಿ ಸರ್ಕಾರದೊಂದಿಗೆ ನಾವು ಹೋಗುವುದಿಲ್ಲ ಎಂದೂ ಕೇಸರ್ಕರ್ ಹೇಳಿದ್ದಾರೆ.
ಪಕ್ಷ ಸೇರುವ ಮುನ್ನ ನೀವು ಯಾರು.. ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಏಕನಾಥ್ ಶಿಂಧೆ ವಿರುದ್ಧ ರಾವುತ್ ಟೀಕೆಯ ಬಾಣಗಳನ್ನು ಬಿಟ್ಟಿದ್ದಾರೆ. ಗುಲಾಬರಾವ್ ಪಾಟೀಲ್ ಪಾನ್ಶಾಪ್ ನಡೆಸುತ್ತಿದ್ದರು. ಪ್ರಕಾಶ್ ಸುರ್ವೆ ತರಕಾರಿ ಮಾರುತ್ತಿದ್ದರು. ಸಂದೀಪನ ಭೂಮಾರೆ ಸಕ್ಕರೆ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಅವರನ್ನು ಪಕ್ಷ ಬೆಳಸಿದೆ.
ಪಕ್ಷ ನೀಡಿದ ಶಕ್ತಿ ಮತ್ತು ಅವಕಾಶದಿಂದಾಗಿ ಇಂದು ಸಾಮಾನ್ಯ ಕಾರ್ಯಕರ್ತ ಸಚಿವ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ. ಕೆಲವರು ಈಗ ಅದನ್ನು ಮರೆತಿದ್ದಾರೆ. ಬಂಡಾಯ ಶಾಸಕರು ಸೇರಿದಂತೆ ಬಿಜೆಪಿ ವಿರುದ್ಧ ರಾವುತ್ ಭಾನುವಾರ ವಾಗ್ದಾಳಿ ನಡೆಸಿದರು.