ಭೋಪಾಲ್: ರಾಜ್ಯದಲ್ಲಿನ ಹಸುಗಳ ರಕ್ಷಣೆಗಾಗಿ 'ಹಸು ಕ್ಯಾಬಿನೆಟ್' ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಕಟಿಸಿದ್ದಾರೆ.
ಪಶುಸಂಗೋಪನೆ, ಅರಣ್ಯ, ಪಂಚಾಯತ್, ಗ್ರಾಮೀಣಾಭಿವೃದ್ಧಿ, ಗೃಹ ಮತ್ತು ರೈತ ಕಲ್ಯಾಣ ಇಲಾಖೆಗಳು 'ಹಸು ಕ್ಯಾಬಿನೆಟ್'ನ ಭಾಗವಾಗಲಿವೆ ಎಂದು ಚೌಹಾಣ್ ಪ್ರಕಟಿಸಿದರು.
ರಾಜ್ಯದಲ್ಲಿ ಹಸುಗಳ ರಕ್ಷಣೆ ಮತ್ತು ಪೋಷಣೆಗೆ 'ಹಸು ಕ್ಯಾಬಿನೆಟ್' ಸ್ಥಾಪಿಸಲು ನಿರ್ಧರಿಸಲಾಗಿದೆ. ಪಶುಸಂಗೋಪನೆ, ಅರಣ್ಯ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಮತ್ತು ರೈತ ಕಲ್ಯಾಣ ಇಲಾಖೆ 'ಹಸು ಕ್ಯಾಬಿನೆಟ್'ನ ಒಂದು ಭಾಗವಾಗಲಿದೆ.
ಅಗರ್ ಮಾಲ್ವಾದ ಗೋ ಅಭಯಾರಣ್ಯದಲ್ಲಿ ನವೆಂಬರ್ 22ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಕ್ಯಾಬಿನೆಟ್ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ.