ಕರ್ನಾಟಕ

karnataka

ETV Bharat / bharat

ಭಗವದ್ಗೀತೆಯಲ್ಲಿ ಜಿಹಾದ್​ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ಶಿವರಾಜ್​ ಪಾಟೀಲ್​ - ಭಗವದ್ಗೀತೆಯಲ್ಲಿ ಜಿಹಾದ್​ ಕುರಿತ ಹೇಳಿಕೆ

ಜಿಹಾದ್ ಪರಿಕಲ್ಪನೆ ಕುರಾನ್‌ನಲ್ಲಿ ಮಾತ್ರವಲ್ಲದೆ ಭಗವದ್ಗೀತೆ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿಯೂ ಉಲ್ಲೇಖವಾಗಿದೆ ಎಂದು ಶಿವರಾಜ್ ಪಾಟೀಲ್ ಇತ್ತೀಚಿನ ಹೇಳಿಕೆಯೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದರು.

Former Home Minister Shivraj Patil
ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್

By

Published : Oct 21, 2022, 5:25 PM IST

ನೋಯ್ಡಾ (ಉತ್ತರ ಪ್ರದೇಶ): ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಜಿಹಾದ್‌ನ ಪಾಠಗಳನ್ನು ಮಾಡಿದ್ದಾನೆ ಎಂದು ನೀಡಿದ ತಮ್ಮ ಹೇಳಿಕೆಗಳಿಗೆ ಇಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದರು.

ಅರ್ಜುನ ಕೃಷ್ಣನಿಗೆ ಭಗವದ್ಗೀತೆಯಲ್ಲಿ ಮಾಡಿದ ಪಾಠವನ್ನು ನೀವು ಜಿಹಾದ್​ ಎಂದು ಹೇಳುತ್ತೀರಾ ಎಂದು ಕೇಳಿದ್ದಕ್ಕೆ ನಾನು ಹೇಳಿದ ಅರ್ಥ ಅದಲ್ಲ ಎಂದಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೇಳಿದ್ದು ಆ ರೀತಿಯಲ್ಲ. ನಾನು ಆ ರೀತಿ ಮಾತನಾಡಿದ ಮೇಲೆ ಅದು ನೀವು, ಅದನ್ನು ಜಿಹಾದ್​ ಎಂದು ಕರೆಯುತ್ತಿರುವುದು. ನೀವು ಕೃಷ್ಣ ಅರ್ಜುನನಿಗೆ ಮಾಡಿದ ಪಾಠವನ್ನು ಜಿಹಾದ್​ ಎಂದು ಕರೆಯುತ್ತೀರಾ?, ಇಲ್ಲ. ಅದನ್ನೇ ನಾನು ಹೇಳಿದ್ದು ಎಂದು ಉತ್ತರಿಸಿದ್ದಾರೆ.

ನವ ದೆಹಲಿಯಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪಾಟೀಲ್, ಮಹಾಭಾರತದಲ್ಲಿ ಗೀತೆಯ ಒಂದು ಭಾಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಪಾಠಗಳನ್ನು ಕಲಿಸಿದ್ದಾನೆ ಎಂದು ಹೇಳಿದ್ದರು. ಪಾಟೀಲ್ ಅವರ ಹೇಳಿಕೆಗೆ ಬಿಜೆಪಿಯಿಂದ ಭಾರಿ ಟೀಕೆ ವ್ಯಕ್ತವಾಗಿತ್ತು.

ಇಸ್ಲಾಂ ಧರ್ಮದಲ್ಲಿ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಎಲ್ಲಾ ಪ್ರಯತ್ನಗಳ ನಂತರವೂ ಯಾರಾದರೂ ಶುದ್ಧ ವಿಚಾರಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಅಧಿಕಾರವನ್ನು ಬಳಸಬಹುದು. ಇದು ಕುರಾನ್ ಷರೀಫ್‌ನಲ್ಲಿ ಮಾತ್ರವಲ್ಲ, ಗೀತೆಯ ಭಾಗವಾಗಿರುವ ಮಹಾಭಾರತದಲ್ಲಿಯೂ ಇದೆ ಎಂದು ಅವರು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ:ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಿಂದುತ್ವ ಹೇರಿಕೆಯನ್ನೂ ಒಪ್ಪಲಾಗಲ್ಲ: ನಟ ಚೇತನ್​​

ABOUT THE AUTHOR

...view details