ಶಿವಪುರಿ (ಮಧ್ಯಪ್ರದೇಶ): ನೀವೆಲ್ಲಾ ಮದುವೆ ಸಮಾರಂಭ, ರಾಜಕೀಯ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡ್ರಮ್ ಬಾರಿಸುವುದು, ಪಟಾಕಿ ಸಿಡಿಸುವುದನ್ನು ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮೊಬೈಲ್ ಖರೀದಿಸಿದ ಖುಷಿಗೆ ಪಾರವೇ ಇರಲಿಲ್ಲ.
ಮಧ್ಯಪ್ರದೇಶದ ಶಿವಪುರಿಯಲ್ಲಿ ಮುರಾರಿ ಎಂಬ ಚಹಾ ಮಾರಾಟಗಾರನೊಬ್ಬ ಹಣ ಕೂಡಿಟ್ಟು 12,500 ರೂಪಾಯಿ ಮೌಲ್ಯದ VIVO Y21 ಮೊಬೈಲ್ ಖರೀದಿಸಿದ್ದಾರೆ. ಮೊಬೈಲ್ ಅಂಗಡಿಯಿಂದ ತಮ್ಮ ಮನೆಯವರೆಗೂ ಸಾರೋಟು ಮೇಲೆ ತಮ್ಮ ಮಗಳನ್ನು ಕೂರಿಸಿ, ಅವಳ ಕೈಯ್ಯಲ್ಲಿ ಮೊಬೈಲ್ ಕೊಟ್ಟು, ಡೋಲು ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ, ಹಾಡುತ್ತ, ಕುಣಿಯುತ್ತಾ ಬ್ಯಾಂಡ್ ಬಾಜಾದೊಂದಿಗೆ ಬಂದಿದ್ದಾರೆ.