ಕರ್ನಾಟಕ

karnataka

ETV Bharat / bharat

ಚುನಾವಣಾ ಆಯೋಗದಿಂದ ನೋಟಿಸ್​: ನ್ಯಾಯಾಲಯದ ಕದ ತಟ್ಟಲಿದೆ ಶಿವಸೇನೆ

ಏಕನಾಥ್ ಶಿಂಧೆ ಅವರು ಶಿವಸೇನೆಯ 40 ಬಂಡಾಯ ಶಾಸಕರೊಂದಿಗೆ ಸರ್ಕಾರ ಸ್ಥಾಪಿಸಿದ್ದಾರೆ. ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ನಡೆಸಲಾಗಿದೆ ಎಂದು ಆರೋಪಿಸಿ ಶಿವಸೇನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಚುನಾವಣಾ ಆಯೋಗದಿಂದ ನೋಟಿಸ್
ಚುನಾವಣಾ ಆಯೋಗದಿಂದ ನೋಟಿಸ್

By

Published : Jul 25, 2022, 4:20 PM IST

ಮುಂಬೈ: ಶಿವಸೇನೆಯಲ್ಲಿ ಆಂತರಿಕ ಕಲಹ ಮತ್ತಷ್ಟು ತಾರಕಕ್ಕೇರಿದೆ. ಮಹಾರಾಷ್ಟ್ರದಲ್ಲಿ ಬಂಡಾಯ ಶಾಸಕರ ಬೆಂಬಲಿತ ಸರ್ಕಾರ ಈಗ ಆಡಳಿತ ನಡೆಸುತ್ತಿದೆ. ಇದರ ಬೆನ್ನಲ್ಲೇ ಶಿವಸೇನೆ ಯಾರಿಗೆ ಸೇರಿದ್ದು ಎಂಬ ಚರ್ಚೆ ಚರ್ಚೆ ಜೋರಾಗಿದೆ. ಶಿವಸೇನೆ ಮೇಲಿನ ಹಿಡಿತ ಸಾಧಿಸುವ ಬಡಿದಾಟ ಈಗ ಕೋರ್ಟ್​​ ಅಂಗಳಕ್ಕೆ ತಲುಪಿದೆ.

ಶಿವಸೇನೆ ಯಾರಿಗೆ ಸೇರಿದ್ದು ಎಂಬುದನ್ನು ನಿರೂಪಿಸುವ ಸಂಬಂಧದ ದಾಖಲೆಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಉದ್ದವ್​ ಠಾಕ್ರೆ ಬಣಕ್ಕೆ ಆದೇಶಿಸಿದೆ. ಚುನಾವಣಾ ಆಯೋಗದ ಈ ನೋಟಿಸ್​ ವಿರುದ್ಧ ಉದ್ಧವ್​ ಠಾಕ್ರೆ ಈಗ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಲು ನಿರ್ಧರಿಸಿದ್ದಾರೆ.

ಏಕನಾಥ್ ಶಿಂಧೆ ಅವರು ಶಿವಸೇನೆಯ 40 ಬಂಡಾಯ ಶಾಸಕರೊಂದಿಗೆ ಸರ್ಕಾರವನ್ನು ಸ್ಥಾಪಿಸಿದ್ದಾರೆ. ಪಕ್ಷದ ನಾಯಕ ಉದ್ಧವ್ ಠಾಕ್ರೆ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮತ್ತೊಂದು ಕಡೆ ಈಗಾಗಲೇ ಉದ್ದವ್​​ ಠಾಕ್ರೆ ಅವರು, ಪಕ್ಷ ವಿರೋಧಿ ಚಟುವಟಿಕೆ ನಡೆಸಲಾಗಿದೆ ಎಂಬ ಕಾರಣಕ್ಕೆ ಶಿಂದೆ ಬಣದ 16 ಶಾಸಕರ ಅನರ್ಹತೆ ಹಾಗೂ ಉದ್ದವ್​ ಬಣದ ಶಾಸಕರ ಅನರ್ಹತೆ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ವಿಷಯದ ಅಂತಿಮ ವಿಚಾರಣೆ ಆಗಸ್ಟ್ 1 ರಂದು ನಡೆಯಲಿದೆ. ಆದರೆ ಈಗಾಗಲೇ ಮೂರನೇ ಎರಡರಷ್ಟು ಶಾಸಕರು ಮತ್ತು ಸಂಸದರು ನಮ್ಮದೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗದ ಕದ ಬಡಿದಿದ್ದಾರೆ.

ಈ ಗುಂಪಿಗೆ ಮಾನ್ಯತೆ ನೀಡಬೇಕು ಎಂದು ಶಿಂದೆ ಬಣ ಆಯೋಗವನ್ನು ಒತ್ತಾಯಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಕದನ ನಡೆಯುತ್ತಿರುವಾಗ ಶಿಂದೆ ಬಳಗ ಚುನಾವಣಾ ಆಯೋಗದ ಮೆಟ್ಟಿಲು ಏರಿರುವುದು ಠಾಕ್ರೆ ಬಣಕ್ಕೆ ಸಂಕಷ್ಟ ತಂದೊಡ್ಡಿದೆ. ಮತ್ತೊಂದು ಕಡೆ, ಪಕ್ಷದ ನಿಜವಾದ ವಾರಸುದಾರರು ನಾವೇ ಎಂಬ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಉದ್ದವ್​ ಠಾಕ್ರೆ ಅವರಿಗೆ ಆಯೋಗ ನೋಟಿಸ್​ ಜಾರಿ ಮಾಡಿದೆ.

ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅಂತಿಮ ವಿಚಾರಣೆ ಇನ್ನೂ ನಡೆದಿಲ್ಲ. ಅದೇ ರೀತಿ ಚುನಾವಣಾ ಆಯೋಗ ಈಗ ಈ ನೋಟಿಸ್​ ಕಳುಹಿಸಿರುವುದರಿಂದ ಶಿವಸೇನೆ ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರಲು ಮುಂದಾಗಿದೆ. ಶಿವಸೇನೆಯ ಈ ಮನವಿಗೆ ನ್ಯಾಯಾಲಯ ಏನು ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌: ರೈತರು, ಭೂ ವಿಜ್ಞಾನಿಗಳ ತೀವ್ರ ವಿರೋಧ

ABOUT THE AUTHOR

...view details