ಕರ್ನಾಟಕ

karnataka

ETV Bharat / bharat

ಶಿವಸೇನೆ ಶಾಸಕ ಪ್ರತಾಪ್ ಸರ್​ನಾಯಕ್, ಪುತ್ರನಿಗೆ ಇಡಿ ಸಮನ್ಸ್ - ಮಹಾರಾಷ್ಟ್ರದ ಶಿವಸೇನೆ ಶಾಸಕ ಪ್ರತಾಪ್ ಸರ್​ನಾಯಕ್

ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಶಿವಸೇನೆ ಶಾಸಕ ಪ್ರತಾಪ್ ಸರ್​ನಾಯಕ್ ಹಾಗೂ ಪುತ್ರ ವಿಹಾಂಗ್​ಗೆ ಇಡಿ ಸಮನ್ಸ್ ಜಾರಿ ಮಾಡಿದೆ.

case
ಇಡಿ ಸಮನ್ಸ್

By

Published : Dec 1, 2020, 4:09 PM IST

ಮುಂಬೈ (ಮಹಾರಾಷ್ಟ್ರ) : ಖಾಸಗಿ ಸಂಸ್ಥೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಶಾಸಕ ಪ್ರತಾಪ್ ಸರ್​​ನಾಯಕ್ ಮತ್ತು ಮಗ ವಿಹಾಂಗ್ ಗೆ ಇಡಿ ಸಮನ್ಸ್ ಜಾರಿ ಮಾಡಿದೆ.

ಟಾಪ್ ಸೆಕ್ಯುರಿಟೀಸ್ ಗ್ರೂಪ್ ಮತ್ತು ಪ್ರತಾಪ್​​​ ನಡುವೆ ಅಕ್ರಮ ವಹಿವಾಟು ನಡೆದಿರೋದಕ್ಕೆ ಇಡಿ ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ನವೆಂಬರ್ 24 ರಂದು ಶಾಸಕರ ನಿವಾಸ ಮತ್ತು ಕಚೇರಿ ಮೇಲೆ ಇಡಿ ದಾಳಿ ನಡೆಸಿ, ವಿಹಾಂಗ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸತತ ಐದು ಗಂಟೆಗಳ ವಿಚಾರಣೆ ನಡೆಸಿ, ಮರುದಿನ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಆದರೆ, ನವೆಂಬರ್ 25 ರಂದು ವಿಹಾಂಗ್ ವಿಚಾರಣೆಗೆ ಹಾಜರಾಗಲಿಲ್ಲ. ಬಳಿಕ 26, 27 ನೇ ತಾರೀಖು ಸಹ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೂ ಹಾಜರಾಗಿರಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಆಪ್ತ ಸಹಾಯಕ, ಟಾಪ್ಸ್ ಸೆಕ್ಯುರಿಟೀಸ್ ಗ್ರೂಪ್​ನ ಪ್ರವರ್ತಕ ಅಮಿತ್ ಚಾಂಡೋಲ್​ ಅವರನ್ನು ಇಡಿ ಬಂಧಿಸಿದೆ.

ABOUT THE AUTHOR

...view details