ಕರ್ನಾಟಕ

karnataka

ETV Bharat / bharat

ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟ ಶಿವಸೇನಾ ಶಾಸಕ - ಶಿವಸೇನೆ ಶಾಸಕ ಅಪ್‌ಡೇಟ್ ಸುದ್ದಿ

ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಮೇಶ್ ಲಟ್ಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Shiv Sena MLA Ramesh Latke dies of heart attack in Dubai
ಶಿವಸೇನಾ ಶಾಸಕ ದುಬೈನಲ್ಲಿ ಹೃದಯಾಘಾತದಿಂದ ಮೃತ

By

Published : May 12, 2022, 8:50 AM IST

ಮುಂಬೈ(ಮಹಾರಾಷ್ಟ್ರ):ಶಿವಸೇನೆ ಶಾಸಕ ರಮೇಶ್ ಲಟ್ಕೆ ಅವರು ದುಬೈನಲ್ಲಿ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಸ್ನೇಹಿತನನ್ನು ಭೇಟಿಯಾಗಲು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಮೇಶ್ ಲಟ್ಕೆ ಅವರಿಗೆ 52 ವರ್ಷ ವಯಸ್ಸಾಗಿತ್ತು. ನಿಧನ ಸುದ್ದಿಯನ್ನು ಸಾರಿಗೆ ಸಚಿವ ಅನಿಲ್ ಪರಬ್ ಪ್ರಕಟಿಸಿದ್ದಾರೆ. ಲಟ್ಟೆ ತಮ್ಮ ಕುಟುಂಬದವರೊಂದಿಗೆ ಶಾಪಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಈಗ ನಾವು ಅವರ ಮೃತದೇಗವನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:'ತಾಜ್ ಮಹಲ್ ಭೂಮಿ ನಮ್ಮ ಪೂರ್ವಜರದ್ದು, ದಾಖಲೆ ಕೊಡಲು ಸಿದ್ಧ': ಜೈಪುರ ರಾಜವಂಶಸ್ಥೆ

ABOUT THE AUTHOR

...view details