ಕರ್ನಾಟಕ

karnataka

ETV Bharat / bharat

ರಾಕೇಶ್ ಟಿಕಾಯತ್​ ಭೇಟಿ ಮಾಡಿ ಚರ್ಚಿಸಿದ ಶಿವಸೇನೆಯ ಸಂಜಯ್ ರಾವತ್ - Rajya Sabha MP Sanjay Rawat

ಇಂದು ಮಧ್ಯಾಹ್ನ ಟಿಕಾಯತ್ ಅವರ ನಿವಾಸದಲ್ಲಿ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು. ಈ ಮಾತುಕತೆಯು ಉತ್ತರ ಪ್ರದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

Shiv Sena leader Sanjay Rawat meets Rakesh Tikayat
Shiv Sena leader Sanjay Rawat meets Rakesh Tikayat

By

Published : Jan 13, 2022, 8:42 PM IST

ಮುಜಾಫರ್‌ನಗರ: ರಾಜ್ಯಸಭಾ ಸಂಸದ ಸಂಜಯ್ ರಾವತ್ ಮತ್ತು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಮುಜಾಫರ್‌ನಗರದಲ್ಲಿ ಭೇಟಿಯಾಗಿದ್ದಾರೆ. ಮಧ್ಯಾಹ್ನ ಟಿಕಾಯತ್ ಅವರ ನಿವಾಸದಲ್ಲಿ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು.

ಸಂಜಯ್ ರಾವತ್ ಅವರು ರಾಕೇಶ್ ಟಿಕಾಯತ್ ಅವರೊಂದಿಗೆ ಚುನಾವಣಾ ವಿಷಯದ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾವತ್, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟಿಕಾಯತ್​ ಅವರು ಸುದೀರ್ಘ ಹೋರಾಟ ನಡೆಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪಂಜಾಬ್ ವಿಧಾನಸಭೆ ಚುನಾವಣೆ: ಸಿಎಂ ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ ಕೇಜ್ರಿವಾಲ್

ಸಿಂಹಾಸನದ ಮೇಲೆ ಯಾರು ಕುಳಿತುಕೊಳ್ಳಬೇಕು ಎಂಬುದನ್ನು ಈ ದೇಶದ ರೈತ ನಿರ್ಧರಿಸುತ್ತಾನೆ. ರೈತನ ಬೆಂಬಲವಿಲ್ಲದೆ ರಾಜಕೀಯ ನಡೆಯುವುದಿಲ್ಲ. ಅದಕ್ಕಾಗಿಯೇ ನಾನು ಮಹಾರಾಷ್ಟ್ರದ ಈ ಮಹಾನ್ ಯೋಧನನ್ನು (ರಾಕೇಶ್ ಟಿಕಾಯತ್) ಭೇಟಿಯಾಗಲು ಬಂದಿದ್ದೇನೆ ಎಂದು ಅವರು ಹೇಳಿದರು.

ABOUT THE AUTHOR

...view details