ಅಮೃತಸರ (ಪಂಜಾಬ್): ಪಂಜಾಬ್ನ ಅಮೃತಸರದಲ್ಲಿ ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಶುಕ್ರವಾರ ಭಾಷಣ ಮಾಡುತ್ತಿದ್ದಾಗಲೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸೂರಿ ವಿರೋಧಿಗಳ ಟಾರ್ಗೆಟ್ ಲಿಸ್ಟ್ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೃತಸರದ ಗೋಪಾಲ್ ದೇವಸ್ಥಾನದ ಬಳಿ ಶಿವಸೇನೆ ಮುಖಂಡರೊಂದಿಗೆ ಸುಧೀರ್ ಸೂರಿ ಧರಣಿ ನಡೆಸುತ್ತಿದ್ದರು. ಆಗ ಅಲ್ಲಿ ಶಿವಸೇನೆ ಮುಖಂಡರು ಹಾಗೂ ಹಿಂದೂ ಮುಖಂಡರು ಮುಖಂಡರೊಂದಿಗೆ ವಾಗ್ವಾದ ನಡೆದಿದೆ. ಇದೇ ವೇಳೆ ಅಪರಿಚಿತ ದುಷ್ಕರ್ಮಿ ಸುಧೀರ್ ಸೂರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.