ಕರ್ನಾಟಕ

karnataka

ETV Bharat / bharat

'ನಿಮ್ಮ ಭಾವನೆಗಳನ್ನು ಗೌರವಿಸುವೆ, ಇಲ್ಲಿಗೆ ಬಂದು ಚರ್ಚಿಸಿ': ಬಂಡಾಯ ಶಾಸಕರಿಗೆ ಠಾಕ್ರೆ ಮನವಿ

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆಯ ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಶೇಷ ಮನವಿ ಮಾಡಿದ್ದಾರೆ.

Shiv Sena chief Uddhav Thackeray
Shiv Sena chief Uddhav Thackeray

By

Published : Jun 28, 2022, 4:25 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆಯ ಶಾಸಕರಿಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. "ನಿಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇನೆ. ಇಲ್ಲಿ ಬಂದು ಚರ್ಚಿಸಿ" ಎಂದು ಅವರು ತಿಳಿಸಿದ್ದಾರೆ.

"ಗುವಾಹಟಿಯಲ್ಲಿರುವ ಅನೇಕ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಹೃದಯದಿಂದ ನೀವೆಲ್ಲರೂ ಶಿವಸೇನೆಯಲ್ಲಿದ್ದೀರಿ. ನಿಮ್ಮ ಸಮಸ್ಯೆಗಳ ಬಗ್ಗೆ ಇಲ್ಲಿಗೆ ಬಂದು ಚರ್ಚಿಸಿ" ಎಂದು ಹೇಳಿದ್ದಾರೆ. ಇದರ ಜೊತೆಗೆ, "ನಿಮ್ಮ ಕುಟುಂಬದ ಕೆಲ ಸದಸ್ಯರೂ ನನ್ನ ಸಂಪರ್ಕದಲ್ಲಿದ್ದು, ನಿಮ್ಮ ಭಾವನೆಗಳ ಬಗ್ಗೆ ತಿಳಿಸಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ:ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಫಡ್ನವೀಸ್; ಸಚಿವ ಸಂಪುಟ ಸಭೆ ಕರೆದ ಉದ್ಧವ್​​​

"ಶಿವಸೇನೆ ಕುಟುಂಬದ ಮುಖ್ಯಸ್ಥನಾಗಿ ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ. ಗೊಂದಲ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಒಟ್ಟಿಗೆ ಕುಳಿತು ದಾರಿ ಹುಡುಕೋಣ. ನನ್ನ ಮುಂದೆ ಬಂದು ಮಾತನಾಡಿದರೆ ಖಂಡಿತವಾಗಿ ದಾರಿ ಸಿಗಲಿದೆ" ಎಂದು ಉದ್ಧವ್ ಠಾಕ್ರೆ ಮನವಿ ಮಾಡಿದರು.

ABOUT THE AUTHOR

...view details