ಔರಂಗಬಾದ್ (ಮಹಾರಾಷ್ಟ್ರ) : ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ನೇಮಿಸಿದ್ದ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ಮುಂಬೈ ಹೈಕೋರ್ಟ್‌ನ ಔರಂಗಾಬಾದ್ ಪೀಠ ರದ್ದುಗೊಳಿಸಿದೆ. ಇನ್ನೆರಡು ತಿಂಗಳಲ್ಲಿ ನೂತನ ಆಡಳಿತ ಮಂಡಳಿಯನ್ನು ನೇಮಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಮಹಾವಿಕಾಸ್ ಅಘಾಡಿ ಸರ್ಕಾರವು ಕಳೆದ ವರ್ಷ ಸೆಪ್ಟೆಂಬರ್ 16 ರಂದು ಸಾಯಿ ಸಂಸ್ಥಾನಕ್ಕೆ ಹನ್ನೊಂದು ಟ್ರಸ್ಟಿಗಳನ್ನು ನೇಮಿಸಿತ್ತು. ಅದರಲ್ಲಿ ಅಧ್ಯಕ್ಷ ಸ್ಥಾನವನ್ನು ಎನ್‌ಸಿಪಿ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಶಿವಸೇನೆ ಹಂಚಿಕೊಂಡಿತ್ತು. ಕೋಪರಗಾಂವ್‌ನ ಎನ್‌ಸಿಪಿ ಶಾಸಕ ಅಶುತೋಷ್ ಕಾಳೆ ಅವರನ್ನು ಸಾಯಿ ಸಂಸ್ಥಾನದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.