ಹೈದರಾಬಾದ್:ತೆಲುಗು ನಟ, ಸೂಪರ್ಸ್ಟಾರ್ ಮಹೇಶ್ ಬಾಬು ಅವರ ಅತ್ತಿಗೆ, ನಟಿ ಶಿಲ್ಪಾ ಶಿರೋಡ್ಕರ್ಗೆ ಕೊರೊನಾ ದೃಢಪಟ್ಟಿದೆ. ಇದನ್ನು ಸ್ವತಃ ಶಿಲ್ಪಾ ಶಿರೋಡ್ಕರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಪ್ರಸ್ತುತ ದುಬೈಯಲ್ಲಿ ವಾಸಿಸುತ್ತಿರುವ ಶಿಲ್ಪಾ ಶಿರೋಡ್ಕರ್ ಅವರು, ಕೊರೊನಾಗೆ ತುತ್ತಾದ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ, ಕೊರೊನಾದಿಂದ ಎಚ್ಚರವಾಗಿರಿ, ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲನೆ ಮಾಡಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.