ಕರ್ನಾಟಕ

karnataka

ETV Bharat / bharat

ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ.. ಸಂಕಷ್ಟ ಪರಿಹರಿಸುವಳಾ ದೇವಿ? - Shilpa Shetty news

ನಟಿ ಶಿಲ್ಪಾ ಶೆಟ್ಟಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಪವಿತ್ರ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದು, ನಾನು ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ದೇವಿಯ ಆಜ್ಞೆ ಮೇರೆಗೆ ನಾನು ಅವಳಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.

Shilpa Shetty undertakes pilgrimage to Mata Vaishnodevi shrine
ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

By

Published : Sep 16, 2021, 6:19 AM IST

ಜಮ್ಮು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬುಧವಾರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಪವಿತ್ರ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಅವರು ದೇಗುಲದ ಬೇಸ್ ಕ್ಯಾಂಪ್‌ಗೆ ಬಂದರು ನಂತರ ಪೊಲೀಸ್ ಸಿಬ್ಬಂದಿಯೊಂದಿಗೆ ಕುದುರೆಯ ಮೇಲೆ ದೇಗುಲಕ್ಕೆ ಪ್ರಯಾಣ ಬೆಳೆಸಿದರು. ಪ್ರಯಾಣದ ಸಮಯದಲ್ಲಿ ಅವರು 'ಜೈ ಮಾತಾ' ಎಂದು ಜಪಿಸುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಪತಿ ಜೈಲಿನಲ್ಲಿ.. ಮಕ್ಕಳೊಂದಿಗೆ ಗಣೇಶ ಹಬ್ಬದ ಆಚರಣೆಯಲ್ಲಿ ಶಿಲ್ಪಾ ಶೆಟ್ಟಿ

ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ನಾನು ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ದೇವಿಯ ಆಜ್ಞೆ ಮೇರೆಗೆ ನಾನು ಅವಳಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದರು.

ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣ:

ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಜತೆಗೆ 11 ಮಂದಿಯನ್ನು ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ರಾಜ್​ ಕುಂದ್ರಾ ಜೈಲಿನಲ್ಲಿದ್ದು, ಈ ಎಲ್ಲಾ ಕಷ್ಟಗಳು ಪಾರಾಗಲಿ ಎಂಬಂತೆ ಶೆಟ್ಟಿ ಅವರು ದೇವಾಲಯಕ್ಕೆ ಭೇಟಿ ನೀಡಿರಬಹುದು ಎನ್ನಲಾಗಿದೆ.

ABOUT THE AUTHOR

...view details