ಮುಂಬೈ, ಮಹಾರಾಷ್ಟ್ರ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರ ವಿರುದ್ಧ ಸುಮಾರು ಒಂದೂವರೆ ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದ್ದು, ಮುಂಬೈ ಮೂಲದ ಉದ್ಯಮಿಯೊಬ್ಬರ ಈ ಆರೋಪಕ್ಕೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮತ್ತು ನನ್ನ ಪತಿಯ ವಿರುದ್ಧ ಕೇಳಿ ಬಂದ ಆರೋಪದಿಂದ ನನಗೆ ಆಘಾತವಾಯಿತು. ಖಾಸಿಫ್ ಖಾನ್ ಎಂಬಾತ ಎಸ್‌ಎಫ್‌ಎಲ್ ಫಿಟ್ನೆಸ್ ಸೆಂಟರ್ ನಡೆಸುತ್ತಿದ್ದು, ಆತನೇ ಎಸ್‌ಎಫ್‌ಎಲ್ ಬ್ರಾಂಡ್ನ ಹೆಸರಿನ ಹಕ್ಕುಗಳನ್ನು ಹೊಂದಿದ್ದನು. ದೇಶಾದ್ಯಂತ ಫಿಟ್ನೆಸ್ ಸೆಂಟರ್ಗಳನ್ನು ತೆರೆಯಲು ಆತ ಮುಂದಾಗಿದ್ದನು. ಎಲ್ಲ ಅಧಿಕಾರಗಳೂ ಆತನಿಗಿದ್ದವು. ನಮಗೆ ಈ ಅವ್ಯವಹಾರದ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.
ನಾವು ಖಾಸಿಫ್ ಖಾನ್ನಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ. ಎಲ್ಲ ಫ್ರಾಂಚೈಸಿಗಳು ನೇರವಾಗಿ ಖಾಸಿಫ್ ಖಾನ್ನೊಂದಿಗೆ ವ್ಯವಹಾರ ನಡೆಸುತ್ತಿದ್ದವು. ಕಂಪನಿಯನ್ನು 2014ರಲ್ಲಿ ಮುಚ್ಚಲಾಗಿದ್ದು, ಎಲ್ಲವೂ ಆತನಿಗೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.