ಕರ್ನಾಟಕ

karnataka

ETV Bharat / bharat

ಮುಂಬೈ ಕ್ರೈಂ ಬ್ರಾಂಚ್ ದಾಳಿ ವೇಳೆ ಶಿಲ್ಪಾಶೆಟ್ಟಿ ಕಣ್ಣೀರು.. ಪತಿ ನಡತೆಗೆ ಆಕ್ರೋಶ!

ರಾಜ್​ಕುಂದ್ರಾ ನಿವಾಸದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ದಾಳಿ ನಡೆಸಿದಾಗ, ಶಿಲ್ಪಾಶೆಟ್ಟಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಶಿಲ್ಪಾಶೆಟ್ಟಿ ಕಣ್ಣೀರು
ಶಿಲ್ಪಾಶೆಟ್ಟಿ ಕಣ್ಣೀರು

By

Published : Jul 27, 2021, 11:14 AM IST

Updated : Jul 27, 2021, 11:27 AM IST

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್​ಕುಂದ್ರಾ ನಿವಾಸದ ಮೇಲೆ ದಾಳಿ ನಡೆಸಿದಾಗ ತನ್ನ ಪತಿ ಬಗ್ಗೆ ತಿಳಿದು ಶಿಲ್ಪಾಶೆಟ್ಟಿ ಕಣ್ಣೀರು ಹಾಕಿದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮುಂಬೈ ಕ್ರೈಂ ಬ್ರಾಂಚ್ ರಾಜ್​ ಕುಂದ್ರಾನನ್ನು ಹೆಚ್ಚಿನ ಶೋಧಗಳಿಗಾಗಿ ಮುಂಬೈ ಮನೆಗೆ ಕರೆದೊಯ್ದು, ಶಿಲ್ಪಾಶೆಟ್ಟಿಯನ್ನೂ ಪ್ರಶ್ನಿಸಿದರು. ವಿಚಾರಣೆ ಬಳಿಕ ಶಿಲ್ಪಾಶೆಟ್ಟಿ ತುಂಬಾ ಅಸಮಾಧಾನಗೊಂಡಿದ್ದರು. ಅಲ್ಲದೆ, ಈ ವೇಳೆ ದಂಪತಿ ಮಧ್ಯೆ ದೊಡ್ಡ ವಾಗ್ವಾದವೇ ನಡೆಯಿತು. ಯಾಕೆ ಈ ರೀತಿ ಮಾಡಿದ್ರಿ ಎಂದು ಕಿರುಚಿದ ಶಿಲ್ಪಾ, ಕುಂದ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ದಂಪತಿ ಸಮಾಧಾನ ಪಡೆಸಲು ಅಧಿಕಾರಿಗಳು ಮಧ್ಯ ಪ್ರವೇಶಿಸಬೇಕಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿಮ್ಮ ಈ ದುಷ್ಕೃತ್ಯಗಳಿಂದ ನಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತಿದೆ. ಉದ್ಯಮದಲ್ಲಿ ತೀವ್ರ ಹಿನ್ನಡೆ ಅನುಸರಿಸಬೇಕಾಗುತ್ತದೆ. ಕುಟುಂಬವು ತೀವ್ರ ಆರ್ಥಿಕತೆ ಎದುರಿಸಬೇಕಾಗಿದೆ. ಸಮಾಜದಲ್ಲಿ ನಮ್ಮ ಗೌರವ ಕಡಿಮೆಯಾಗಲಿದೆ. ಇಂಥ ಕೆಲಸಗಳನ್ನು ಮಾಡುವ ಅವಶ್ಯಕತೆ ನಿಮಗೇನಿತ್ತು ಎಂದು ಪತಿಗೆ ಶಿಲ್ಪಾ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮಾರ್ಚ್​​ನಲ್ಲಿ ನಡೆದ ಅಶ್ಲೀಲ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ಶಾಖೆಯು 9 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಆ ಸಮಯದಲ್ಲಿ ಕುಂದ್ರಾ, ಮೊಬೈಲ್​ ಬದಲಾಯಿಸಿದ್ದರಿಂದ ಡೇಟಾ ಮರುಪಡೆಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ, ಪೊಲೀಸರು ಸಾಕ್ಷ್ಯ ಸಂಗ್ರಹಿಸಿ ಜುಲೈ 9 ರಂದು ಕುಂದ್ರಾ ಬಂಧಿಸಿದ್ದರು.

ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಜುಲೈ 19 ರಂದು ಮುಂಬೈ ಪೊಲೀಸರು ರಾಜ್​ಕುಂದ್ರಾ ಸೇರಿ 11 ಜನರನ್ನು ಬಂಧಿಸಿದ್ದರು. ಈ ಮಧ್ಯೆ ರಾಜ್​ ಕುಂದ್ರಾ ಮತ್ತು ಶಿಲ್ಪಾಶೆಟ್ಟಿ ಅವರ ಆರ್ಥಿಕ ಮೂಲ ಮತ್ತು ಅಶ್ಲೀಲ ಚಿತ್ರಗಳ ದಂಧೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲು ಮುಂಬೈ ಕ್ರೈಂ ಬ್ರಾಂಚ್​ ಹಣಕಾಸು ಲೆಕ್ಕ ಪರಿಶೋಧಕರನ್ನು ನೇಮಿಸಿದೆ.

ಇದನ್ನೂ ಓದಿ: Pornography case: ರಾಜ್​ಕುಂದ್ರಾ ಪೊಲೀಸ್ ಕಸ್ಟಡಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು!

ತನಿಖೆಯಲ್ಲಿ ಶಿಲ್ಪಾಶೆಟ್ಟಿ ಮತ್ತು ರಾಜ್​ಕುಂದ್ರಾ ಅವರ ಜಂಟಿ ಖಾತೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ. ಅಶ್ಲೀಲ ವಿಡಿಯೋ ಅಪ್ಲೋಡ್​​ ಮಾಡುತ್ತಿದ್ದ ಆ್ಯಪ್​ಗಳಿಂದ ಈ ಆದಾಯ ಬಂದಿದೆ ಎಂದು ಅಪರಾಧ ಶಾಖೆ ಶಂಕಿಸಿದೆ.ಆ್ಯಪ್‌ಗಳಿಂದ ಗಳಿಸಿದ ಹಣವನ್ನು ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಕುಂದ್ರಾ ಅವರ ನಾಲ್ವರು ನೌಕರರು ಆತನ ವಿರುದ್ಧ ಸಾಕ್ಷಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Jul 27, 2021, 11:27 AM IST

ABOUT THE AUTHOR

...view details