ಕರ್ನಾಟಕ

karnataka

ETV Bharat / bharat

ಗಣೇಶನ ವಿಗ್ರಹ ಮನೆಗೆ ತಂದ ಶಿಲ್ಪಾಶೆಟ್ಟಿ.. ಗಣಪತಿ ಬಪ್ಪಾ ಮೋರಯಾ ಎಂದು ಜೈಕಾರ ಹಾಕಿದ ನಟಿ - ಗಣಪತಿ ಉತ್ಸವ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಗಣೇಶ ಮೂರ್ತಿ ಖರೀದಿಸಿ ಗಣಪತಿ ಬಪ್ಪಾ ಮೋರಯಾ ಜಯಘೋಷ ಹಾಕಿ ಗಜಾನನನ್ನು ಬರ ಮಾಡಿಕೊಂಡಿದ್ದಾರೆ.

ಶಿಲ್ಪಾಶೆಟ್ಟಿ
ಶಿಲ್ಪಾಶೆಟ್ಟಿ

By

Published : Sep 9, 2021, 7:13 AM IST

ಮುಂಬೈ:ಬಾಲಿವುಡ್​ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಪ್ರತಿ ವರ್ಷ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ಒಂದು ದಿನ ಮುಂಚಿತವಾಗಿ ಮುಂಬೈನ ಲಾಲ್​ಬಾಗ್​​ ಗಣಪತಿ ವರ್ಕ್​ ಶಾಪ್​ನಲ್ಲಿ ಮೂರ್ತಿ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಗಣಪತಿ ಬಪ್ಪಾ ಮೋರಯಾ ಜಯಘೋಷ ಹಾಕಿ ಗಜಾನನ ಬರಮಾಡಿಕೊಂಡ ಶೆಟ್ಟಿ

ಗಣಪನ ಮೂರ್ತಿ ಖರೀದಿಸಿದ ಶಿಲ್ಪಾಶೆಟ್ಟಿ, ಬಳಿಕ ಗಣಪತಿ ಬಪ್ಪಾ ಮೋರಯಾ ಜಯಘೋಷ ಹಾಕಿದರು. ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಶಿಲ್ಪಾಶೆಟ್ಟಿ ಪುತ್ರ ವಿಹಾನ್​ ಗಣಪನನ್ನು ಮನೆಗೆ ಬರಮಾಡಿಕೊಂಡಿದ್ದು, ನಾಳೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ಶಿಲ್ಪಾ ಶೆಟ್ಟಿ ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ಪತಿ ರಾಜ್​ ಕುಂದ್ರಾ ಇಲ್ಲದೇ ಗಣೇಶ ಹಬ್ಬ ಆಚರಿಸುತ್ತಿದ್ದಾರೆ.

ಇದನ್ನೂ ಓದಿ: ಕತ್ತಿನ ಬಳಿ ಚಾಕು ಇರಿಸಿ ಬಾಲಿವುಡ್​ ನಟಿ ಮನೆಯಲ್ಲಿ ದರೋಡೆ

ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ ಜೈಲು ಸೇರಿದ್ದಾರೆ.

ABOUT THE AUTHOR

...view details