ಕರ್ನಾಟಕ

karnataka

ETV Bharat / bharat

ಶಿಲ್ಪಾಶೆಟ್ಟಿ ದಂಪತಿ ವಿರುದ್ಧ ಕೈಗೊಂಡಿರುವ ಕ್ರಮದ ವರದಿ ಸಲ್ಲಿಸಿ: ಪೊಲೀಸರಿಗೆ ರೋಹಿಣಿ ಕೋರ್ಟ್ ಸೂಚನೆ

ಅಶ್ಲೀಲ ವಿಡಿಯೋ ನಿರ್ಮಿಸಲು ಹೂಡಿಕೆದಾರರ ಹಣ ಬಳಸಿದ ಆರೋಪ ಹೊತ್ತಿರುವ ಶಿಲ್ಪಾಶೆಟ್ಟಿ ದಂಪತಿ ವಿರುದ್ಧ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ರೋಹಿಣಿ ಕೋರ್ಟ್ ದೆಹಲಿ ಪೊಲೀಸರಿಗೆ ನಿರ್ದೇಶಿಸಿದೆ.

ಶಿಲ್ಪಾಶೆಟ್ಟಿ ದಂಪತಿ
ಶಿಲ್ಪಾಶೆಟ್ಟಿ ದಂಪತಿ

By

Published : Sep 2, 2021, 12:50 PM IST

ನವದೆಹಲಿ: ಅಶ್ಲೀಲ ವಿಡಿಯೋ ನಿರ್ಮಿಸಲು ತಮ್ಮ ಕಂಪನಿ(ವಿಯಾನ್​)ಯ ಹೂಡಿಕೆದಾರರ ಹಣವನ್ನು ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ರೋಹಿಣಿ ಕೋರ್ಟ್ ಸೂಚಿಸಿದೆ.

ಶಿಲ್ಪಾಶೆಟ್ಟಿ ದಂಪತಿ ಮೇಲೆ ಕೈಗೊಂಡಿರುವ ಕ್ರಮಗಳ ವರದಿಯನ್ನು ಕೋರ್ಟ್​ಗೆ ಸಲ್ಲಿಸಬೇಕು ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್​ನ ನ್ಯಾಯಮೂರ್ತಿ ಮಾನ್ಸಿ ಮಲಿಕ್ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ. ಅಲ್ಲದೇ, ನವೆಂಬರ್​ 9 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

ಆರ್ಟೆಕ್​ ಬಿಲ್ಡರ್ಸ್​ ಪಾಲುದಾರ ವಿಶಾಲ್ ಗೋಯಲ್​, ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ದಂಪತಿ, ವಿಯಾನ್​ ಇಂಡಸ್ಟ್ರೀಸ್​ಗೆ ಹಣ ಹೂಡಿಕೆ ಮಾಡಲು ಕೇಳಿಕೊಂಡ ಹಿನ್ನೆಲೆ ನಾನು 41 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇನೆ. ಇಲ್ಲಿ, ಅನಿಮೇಷನ್​, ಗೇಮಿಂಗ್, ಪರವಾನಗಿ, ತಂತ್ರಜ್ಞಾನ ಮತ್ತು ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ಬಾಲಕಿ ಆತ್ಮಹತ್ಯೆ ಪ್ರಕರಣ: ಮಂಡ್ಯದಲ್ಲಿ ರೌಡಿಶೀಟರ್ ಸೇರಿ ಮೂವರ ಬಂಧನ

ಆದರೆ, ನಾನು ಹೂಡಿದ ಹಣವನ್ನು ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಲ್ಲದೆ, ಶಿಲ್ಪಾಶೆಟ್ಟಿ, ರಾಜ್​ ಕುಂದ್ರಾ ವಿರುದ್ಧ ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿರುವ ಗೋಯಲ್​, ಎಫ್ಐಆರ್ ದಾಖಲಿಸಲು ಆದೇಶಿಸುವಂತೆ ಕೋರಿದ್ದಾರೆ.

ABOUT THE AUTHOR

...view details